ಸಿಬ್ಬಂದಿ ಬಳಿ ಜಾತಿ ವಿವರ ಕೇಳಿದ ಬಿಡಿಎ ಉಪಕಾರ್ಯದರ್ಶಿ: ಆರೋಪ
ಬೆಂಗಳೂರು, ಜು.25: ಸರಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಬಳಿ ಜಾತಿ ವಿವರ ಕೇಳುವಂತಿಲ್ಲ ಎಂಬ ಕಾನೂನು ಇದ್ದರು ಮಾಹಿತಿ ನೆಪದಲ್ಲಿ ಬಿಡಿಎ ಅಧಿಕಾರಿಯೊಬ್ಬರು ತಮ್ಮ ಸಿಬ್ಬಂದಿ ಬಳಿ ಜಾತಿ ವಿವರ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಿಬ್ಬಂದಿಯ ವಿವರ ಕೇಳುವ ನೆಪದಲ್ಲಿ ಬಿಡಿಎ ಉಪಕಾರ್ಯದರ್ಶಿ ಚಿದಾನಂದ್ ಅವರು ಜಾತಿ ವಿವರ ಕೇಳಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಆರೋಪಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಬಿಡಿಎ ಉಪಕಾರ್ಯದರ್ಶಿ ಚಿದಾನಂದ್ ಅವರು ಸಿಬ್ಬಂದಿಯ ಮಾಹಿತಿ ಹೆಸರಿನಲ್ಲಿ ಜಾತಿ ವಿವರ ನೀಡುವಂತೆ ಸುತ್ತೋಲೆ ಹೊರಡಿಸಿದ್ದಾರೆ ಎನ್ನಲಾಗುತ್ತಿದ್ದು, ಎಲ್ಲಾ ಘಟಕಾಧಿಕಾರಿಗಳಿಗೆ ಪತ್ರ ರವಾನಿಸಿ, ಎಲ್ಲಾ ಸೆಕ್ಷನ್‍ನಲ್ಲಿ ಕಾರ್ಯನಿರ್ವಹಿಸುವವರ ಬಗ್ಗೆ ಜಾತಿ ಸಮೇತ ಮಾಹಿತಿ ನೀಡುವಂತೆ ಸುತ್ತೋಲೆ ಹೊರಡಿಸಿದ್ದಾರ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಬಿಡಿಎನಲ್ಲಿ ಕಾರ್ಯನಿರ್ವಹಿಸುವವರ ಹೆಸರು, ಹುದ್ದೆ, ಜನ್ಮ ದಿನಾಂಕದ ಜೊತೆ ಜಾತಿ ವಿವರ ನೀಡಲು ಸೂಚಿಸಿದ್ದು, ಜಾತಿ ವಿವರ ಕೇಳಿದಕ್ಕೆ ಸಿಬ್ಬಂದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಮೊದಲೇ ಎಲ್ಲಾ ದಾಖಲಾತಿಗಳನ್ನ ನೀಡಿ ಸರಕಾರಿ ಕೆಲಸಕ್ಕೆ ಸೇರ್ಪಡೆಯಾಗಿದ್ದೇವೆ. ಮತ್ತೆ ಜಾತಿ ವಿವರ ಕೇಳುತ್ತಿದ್ದಾರೆ. ಕೇಳಿರುವುದು ಎಷ್ಟು ಸರಿ ಎಂದು ಸಿಬ್ಬಂದಿ ಪ್ರಶ್ನಿಸಿದ್ದಾರೆ.





