ವಾಹನ ಢಿಕ್ಕಿಯಾಗಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಅಧಿಕಾರಿ ಸಾವು

ಹೊಸದಿಲ್ಲಿ,ಜು.26: ರಾಜೋಕ್ರಿ ಮೇಲ್ಸೇತುವೆ ಸಮೀಪ ಶನಿವಾರ ರಾತ್ರಿ ಕರ್ತವ್ಯದಲ್ಲಿದ್ದ ದಿಲ್ಲಿ ಪೊಲೀಸ್ ಟ್ರಾಫಿಕ್ ಘಟಕದ ಎಸಿಪಿ ವೇಗವಾಗಿ ಬಂದ ವಾಹನವೊಂದು ಢಿಕ್ಕಿಯಾದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಬಳಿಕ ಟಾಟಾ 407 ವಾಹನದ ಚಾಲಕ ಪರಾರಿಯಾಗಿದ್ದಾನೆ. ಎಸಿಪಿ ಸಂಕೇತ್ ಕೌಶಿಕ್ ಫ್ಲೈ ಓವರ್ ಸಮೀಪ ವಾಹನ ಸಂಚಾರವನ್ನು ನಿಭಾಯಿಸುತ್ತಿದ್ದ ವೇಳೆ ಘಟನೆ ನಡೆದಿದೆ.
58ರ ಹರೆಯದ ಹಿರಿಯ ಪೊಲೀಸ್ ಅಧಿಕಾರಿಯನ್ನು ಏಮ್ಸ್‌ನ ಟ್ರೌಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮೊದಲೆ ಕೌಶಿಕ್ ಮೃತಪಟ್ಟಿದ್ದರು. ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





