ಸುನ್ನೀ ಹೆಲ್ಪ್ ಡೆಸ್ಕ್ ನಿಂದ ಕೋವಿಡ್ ಮೃತದೇಹದ ಅಂತ್ಯಕ್ರಿಯೆ

ಉಡುಪಿ, ಜು.26: ಕೊರೋನ ಸೋಂಕಿನಿಂದ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಶಿವಮೊಗ್ಗದ ಮಹಿಳೆಯ ಅಂತ್ಯಕ್ರಿಯೆಯನ್ನು ಜಿಲ್ಲೆಯ ಸುನ್ನೀ ಉಲಮಾ ಒಕ್ಕೂಟ, ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಸಂಯುಕ್ತ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್, ಎಸ್‌ಡಿಐಗಳ ಜಂಟಿ ಸೇವಾ ಸಮಿತಿಯಾಗಿರುವ ಕೋವಿಡ್-19 ಸುನ್ನೀ ಹೆಲ್ಪ್ ಡೆಸ್ಕ್ ನಿಂದ ಜು.26ರಂದು ಸಂಜೆ ಉಡುಪಿ ನಗರದ ಖಬರ್ ಸ್ತಾನದಲ್ಲಿ ನೆರವೇರಿಸಲಾಯಿತು.
ಧಾರ್ಮಿಕ ವಿಧಿಯನ್ನು ಪಿ.ಎಂ.ಎ ಅಶ್ರಫ್ ಅಂಜದಿ, ಮಜೀದ್ ಹನೀಫಿ ನೇತೃತ್ವದಲ್ಲಿ ನಡೆಸಲಾಯಿತು. ಹಂಝತ, ರಫೀಕ್ ದೊಡ್ಡಣಗುಡ್ಡೆ, ಹನೀಫ್ ಕನ್ನಂಗಾರ್, ಫಾರೂಖ್ ಆರ್.ಕೆ., ಸುಬ್ಹಾನ್ ಅಹ್ಮದ್ ಹೊನ್ನಾಳ, ರವೂಫ್ ಖಾನ್, ಇಂತಿಯಾಝ್ ಹೊನ್ನಾಳ, ಖಯ್ಯೂಮ್ ಮಲ್ಪೆ, ಸಿದ್ದೀಕ್ ಅಂಬಾಗಿಲು, ಸಫ್ವಾನ್ ಮೂಳೂರು, ಇಬ್ರಾಹಿಂ ಆರ್.ಕೆ., ಆಸಿಫ್ ಮೂಳೂರು ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಸಿದರು.
Next Story





