ಮೂರು ಹೊಸ ಕೋವಿಡ್ ಲ್ಯಾಬ್ ಇಂದು ಉದ್ಘಾಟನೆ

ಹೊಸದಿಲ್ಲಿ, ಜು.26: ದಿನಂಪ್ರತಿ ಕೊರೋನ ಸೋಂಕಿನ 10,200 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡುವ ಸಾಮರ್ಥ್ಯದ ಮೂರು ಹೊಸ ಪ್ರಯೋಗಾಲಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.
ಮುಂಬೈ, ಕೋಲ್ಕತಾ ಮತ್ತು ನೋಯ್ಡಾದಲ್ಲಿ ಈ ಪ್ರಯೋಗಾಲಯಗಳು ಕಾರ್ಯಾರಂಭ ಮಾಡಲಿವೆ. ಅತ್ಯಧಿಕ ಪರೀಕ್ಷೆಯ ಸಾಮರ್ಥ್ಯ ಹೊಂದಿರುವ ಒಂದೇ ಯಂತ್ರದ ಬಳಕೆ ಅಥವಾ , ಸಾಮರ್ಥ್ಯ ಹೆಚ್ಚಿಸಲು ಹಲವು ಯಂತ್ರಗಳನ್ನು ಬಳಸುವ ವ್ಯವಸ್ಥೆ ಹೊಂದಿರುವ ಪ್ರಯೋಗಾಲಯಗಳನ್ನು ಥ್ರೂಪುಟ್ ಪ್ರಯೋಗಾಲಯ ಎಂದು ಕರೆಯಲಾಗುತ್ತದೆ.
ಮುಂಬೈಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ ಇನ್ ರಿಪ್ರೊಡಕ್ಟಿವ್ ಹೆಲ್ತ್, ಕೋಲ್ಕತಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಾಲರ ಆ್ಯಂಡ್ ಎಂಟೆರಿಕ್ ಡಿಸೀಸಸ್ ಮತ್ತು ನೋಯ್ಡಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಪ್ರಿವೆನ್ಷನ್ ಆ್ಯಂಡ್ ರಿಸರ್ಚ್‌ನಲ್ಲಿ ಈ ನೂತನ ಪ್ರಯೋಗಾಲಯಗಳನ್ನು ಆರಂಭಿಸಲಾಗುವುದು. ಈ ಮೂರೂ ಕೂಡಾ ಕೊರೋನ ಪರೀಕ್ಷೆಗೆ ಅಗತ್ಯವಿರುವ ‘ಜೈವಿಕ ಸುರಕ್ಷತೆಯ ಮಟ್ಟ 2ರ’ ಶ್ರೇಣಿಯ ಪ್ರಯೋಗಾಲಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.





