ಸಂಗಾತ ಕಥಾ ಬಹುಮಾನಕ್ಕೆ ಕತೆಗಳ ಆಹ್ವಾನ
ಬೆಂಗಳೂರು, ಜು.26: ಸಂಗಾತ ಕಥಾ ಬಹುಮಾನಕ್ಕೆ ಯುವ ಕತೆಗಾರರಿಂದ ಕತೆಗಳನ್ನು ಆಹ್ವಾನಿಸಲಾಗಿದೆ. ಬಹುಮಾನಿತ ಕತೆಗೆ 10 ಸಾವಿರ ರೂ. ಹಾಗೂ ಒಪ್ಪಿತ ಎರಡು ಕತೆಗಳಿಗೆ ತಲಾ 5 ಸಾವಿರ ರೂ. ಬಹುಮಾನ ಇದೆ.
ಕತೆಗಳನ್ನು ಕಳುಹಿಸಲು ಆ.31 ಕಡೆಯ ದಿನವಾಗಿದೆ. 35 ವರ್ಷದೊಳಗಿನವರು ಮಾತ್ರ ಕತೆಗಳನ್ನು ಕಳುಹಿಸಬೇಕು. ಕತೆಗೆ ಪದ ಮಿತಿ ಇರುವುದಿಲ್ಲ. ಕತೆಯು ನುಡಿ ತಂತ್ರಾಂಶದಲ್ಲಿರಬೇಕು. ಕತೆಯನ್ನು ಮೇಲ್ ssssangaata2018@gmail.com ನಲ್ಲಿ ಮಾತ್ರ ಕಳುಹಿಸಬೇಕು. ಅಂಚೆ ಮೂಲಕ ಬಂದ ಕತೆಗಳನ್ನು ಸ್ವೀಕರಿಸುವುದಿಲ್ಲ.
ಬಹುಮಾನಕ್ಕೆ ಕಳುಹಿಸುವ ಕತೆಯನ್ನು ಈ ಹಿಂದೆ ಯಾವುದರಲ್ಲೂ ಪ್ರಕಟಗೊಂಡಿರಬಾರದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.9341757653ಕ್ಕೆ ಸಂಪರ್ಕಿಸಲು ತಿಳಿಸಲಾಗಿದೆ.
Next Story





