50 ದಿನ ಪೂರೈಸಿದ ವಕೀಲರ ಆನ್‍ಲೈನ್ ಉಪನ್ಯಾಸ
ಮೈಸೂರು,ಜು.26: ಅಖಿಲ ಭಾರತ ವಕೀಲರ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಆಯೋಜನೆ ಮಾಡಿರುವ ಆನ್‍ಲೈನ್ ಉಪನ್ಯಾಸ ಕಾರ್ಯಾಗಾರ ಇಂದಿಗೆ 60ನೇ ದಿನ ಪೂರೈಸಿದ್ದು ಯಶಸ್ವಿಯಾಗಿ ನಡೆಯುತ್ತಿದೆ.
ಜೂ.26 ರಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಮೂರ್ತಿಗಳಾದ ಶ್ರೀ ಎಚ್.ಎನ್. ನಾಗಮೋಹನ್ ದಾಸರವರು ಉದ್ಘಾಟನೆ ನೇರವೇರಿಸಿ ಆನ್‍ಲೈನ್ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಸದರಿ ಆನ್‍ಲೈನ್ ಉಪನ್ಯಾಸ 60 ದಿನ ನಿರಂತರವಾಗಿ ಮುಂದುವರಿದುಕೊಂಡು ಬಂದಿರುವುದು ಸಂತಸದ ಸಂಗತಿ ಎಂದು ಮೈಸೂರಿನ ಖ್ಯಾತ ವಕೀಲ ಬಾಬುರಾಜ್ ತಿಳಿಸಿದ್ದಾರೆ.
ದಿನನಿತ್ಯ ಕಾನೂನು ವಿಷಯಗಳ ಕುರಿತು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಮೂರ್ತಿಗಳು ಹಾಗೂ ಕರ್ನಾಟಕ ನ್ಯಾಯಾಂಗ ಅಕೆಡೆಮಿಯಲ್ಲಿ ಭೋಧನೆ ಮಾಡುವ ನ್ಯಾಯಾಧೀಶರು ಹಾಗೂ ಉಪನ್ಯಾಸಕರು ಮತ್ತು ಕರ್ತವ್ಯ ನಿರತ ಜಿಲ್ಲಾ ನ್ಯಾಯಾಧೀಶರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ಹಿರಿಯ ನ್ಯಾಯವಾದಿಗಳು ಮತ್ತು ಕಾನೂನು ಮಹಾವಿದ್ಯಾಲಯಗಳ ನೂರಿತ ಉಪನ್ಯಾಸಕರಿಂದ ಆನ್‍ಲೈನ್ ಉಪನ್ಯಾಸ ಕಾರ್ಯಕ್ರಮಗಳು ನಿರಂತರವಾಗಿ ಜರುಗಿಕೊಂಡು ಬರುತ್ತಿವೆ.
ಆನ್‍ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಹಲವಾರು ವಕೀಲರು ಮತ್ತು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯದಿಂದ ಕೆಲವು ವಕೀಲರು ಭಾಗವಹಿಸುತ್ತಿದ್ದು, ದಿನನಿತ್ಯ 350ಕ್ಕೂ ಹೆಚ್ಚು ವಕೀಲರು ಭಾಗವಹಿಸಿ ಕಾನೂನು ವಿಷಯಗಳ ಕುರಿತು ಉಪನ್ಯಾಸವನ್ನು ಆಲಿಸತ್ತಾ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತ ಬಂದಿರುತ್ತಾರೆ. ಉಪನ್ಯಾಸಕರು ಕಾನೂನು ವಿಷಯಗಳ ಕುರಿತು ಮತ್ತು ಸುಪ್ರೀಂ ಕೋರ್ಟ ಮತ್ತು ಹೈಕೋರ್ಟಗಳ ತೀರ್ಪುಗಳನ್ನ ಉಲ್ಲೇಖಿಸಿ ಉಪನ್ಯಾಸ ನೀಡುತ್ತಿರುವುದು ವೃತ್ತಿ ನಿರತ ವಕೀಲರಿಗೆ ಬಹಳ ಅನುಕೂಲಕರವಾಗಿದೆ.
ಕೋರೋನ ವೈರಸ್ ತೀರ್ವಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಹಲವು ದಿನಗಳ ಕಾಲ ನ್ಯಾಯಾಲಯದ ಕಾರ್ಯ ಕಲಾಪಗಳು ನಡೆಯುವುದು ಅನುಮಾನ, ಈ ಪರಿಸ್ಥಿತಿಯಲ್ಲಿ ವಕೀಲರು ಮನೆಯಲ್ಲಿಯೇ ಇರುವುದರಿಂದ ಈ ಸಮಯವನ್ನು ಸದುಪಯೋಗ ಪಡೆಸುಕೊಳ್ಳಲಿ ಎಂಬ ಉದ್ದೇಶದಿಂದ ಈಗ ನಡೆಯುತ್ತಿರುವ ಆನ್‍ಲೈನ್ ಉಪನ್ಯಾಸಗಳನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಈ ಆನ್‍ಲೈನ್ ಉಪನ್ಯಾಸದಲ್ಲಿ 500 ಜನ ವಕೀಲರು ಭಾಗವಹಿಸಲು ಅವಕಾಶವಿದ್ದು, ಆಸಕ್ತ ವಕೀಲರು ಈ ಆನ್‍ಲೈನ್ ಉಪನ್ಯಾಸದಲ್ಲಿ ಭಾಗವಹಿಸಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿ ಕೆ. ಎಚ್. ಪಾಟೀಲ್ ಇವರು ತಿಳಿಸಿದ್ದಾರೆ.
ಪ್ರಸಕ್ತ ಡಿಜಿಟಲ್ ಯುಗದಲ್ಲಿ ವಕೀಲರು ತಂತ್ರಜ್ಞಾನಗಳ ಮಾಹಿತಿ ಪಡೆದುಕೊಳ್ಳುವುದು ಬಹಳ ಅಗತ್ಯವಿರುತ್ತದೆ. ಅಲ್ಲದೆ ಕೋರ್ಟ ಕಲಾಪಗಳು ಕೂಡ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇ-ಫೈಲಿಂಗ್ ಮತ್ತು ವೀಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸುವ ಅನಿವಾರ್ಯತೆಗಳು ಉದ್ಭವಿಸಿದೆ. ಕಾರಣ ವಕೀಲರು ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಶೀಘ್ರಗತಿಯಲ್ಲಿ ಕಾನೂನು ವಿಷಯಗಳ ಮಾಹಿತಿ ಪಡೆದುಕೊಳ್ಳಲು ಕಾನೂನು ಕಾರ್ಯಾಗಾರಗಳನ್ನು ನಡೆಸುವುದು ಬಹಳ ಅಗತ್ಯವಿದೆ.
-ಬಿ.ವಿ.ಸುರೇಂದ್ರನಾಥ್, ಅಖಿಲ ಭಾರತ ವಕೀಲರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ.







