ಉಡುಪಿ: ಮಹಿಳಾ ಗ್ರಾಹಕ ಮಂಡಳಿಯಿಂದ ಅಭಿಜ್ಞಾ ರಾವ್ ಸನ್ಮಾನ

ಉಡುಪಿ, ಜು.27: ಜಿಲ್ಲಾ ಮಹಿಳಾ ಗ್ರಾಹಕ ಮಂಡಳಿ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಉಡುಪಿಯ ಅಭಿಜ್ಞಾ ರಾವ್ ಅವರನ್ನು ಸೋಮವಾರದಂದು ಮಂಡಳಿಯ ಸಭಾಂಗಣದಲ್ಲಿ ಗೌರವಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಶಿಲಾ ಕೆ.ಶೆಟ್ಟಿ ಅಭಿಜ್ನಾ ರಾವ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಭಿಜ್ಞಾ ರಾವ್ ಅವರ ತಾಯಿ ಆಶಾ ರಾವ್, ಕಾಪು ಮಹಿಳಾ ಮಂಡಳಿಗಳ ಕಾರ್ಯದರ್ಶಿ ರಮಾಶೆಟ್ಟಿ, ಉಡುಪಿ ಮಹಿಳಾ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯಶೋದಾ ಶೆಟ್ಟಿ, ಸಮೃದ್ದಿ ಮಾಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಪ್ರಸನ್ನಾ ಭಟ್ ಮೊದಲಾದವರು ಉಪಸ್ಥಿತರಿದ್ದರು.
Next Story





