ರಾಜ್ಯದಾದ್ಯಂತ ಎಪಿಎಂಸಿ ಬಂದ್ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಎಪಿಎಂಸಿ ವರ್ತಕರು
ಬೆಂಗಳೂರು, ಜು.27: ರೈತರಿಂದ ಖರೀದಿಸುವ ಉತ್ಪನ್ನಗಳಿಗೆ ವಿಧಿಸುವ ಸೆಸ್ ಪ್ರಮಾಣ ಕಡಿಮೆ ಮಾಡಲು ಒತ್ತಾಯಿಸಿ ರಾಜ್ಯದಾದ್ಯಂತ ಎಪಿಎಂಸಿ ಬಂದ್ ಮಾಡುವ ನಿರ್ಧಾರವನ್ನು ಎಪಿಎಂಸಿ ವರ್ತಕರು ಹಿಂಪಡೆದಿದ್ದಾರೆ.
ಎಪಿಎಂಸಿ ಪ್ರಾಂಗಣಗಳ ಹೊರತಾದ ವ್ಯಾಪಾರ ಪ್ರದೇಶಗಳಲ್ಲಿ ವ್ಯವಹರಿಸುವವರಿಗೆ ಮಾರುಕಟ್ಟೆ ಶುಲ್ಕ ಇಲ್ಲದರಿಂದ ಎಪಿಎಂಸಿ ವರ್ತಕರಿಗೆ ವಹಿವಾಟಿನಲ್ಲಿ ಪೈಪೋಟಿಗೆ ಹಾಗೂ ಸಮಾನ ಅವಕಾಶಕ್ಕಾಗಿ ಒತ್ತಾಯಿಸಿ, ಎಫ್‍ಕೆಸಿಸಿಐ ಹಾಗೂ ಎಪಿಎಂಸಿ ವರ್ತಕರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು. ಈಗ ಸರಕಾರ ಪರಿಗಣಿಸಿ ಮಾರುಕಟ್ಟೆ ಶುಲ್ಕವನ್ನು ಕಡಿತಗೊಳಿಸಿದೆ.
ವರ್ತಕರ ಮನವಿಗೆ ಸ್ಪಂದಿಸಿದ ಸರಕಾರ, ಸೆಸ್ ಪ್ರಮಾಣವನ್ನು ಶೇ 1ರಿಂದ ಶೇ 0.35ಕ್ಕೆ ಇಳಿಸಿದೆ. ಇದನ್ನು ರಾಜ್ಯದಾದ್ಯಂತ ಎಲ್ಲ ಎಪಿಎಂಸಿ ವರ್ತಕರು ಸ್ವಾಗತಿಸಿದ್ದಾರೆ. ಹಾಗಾಗಿ, ಎಪಿಎಂಸಿಗಳಲ್ಲಿ ವಹಿವಾಟು ಬಂದ್ ಮಾಡುವ ನಿರ್ಧಾರವನ್ನು ಕೈಬಿಟ್ಟಿದ್ದೇವೆ ಎಂದು ಎಫ್‍ಕೆಸಿಸಿಐನ ಎಪಿಎಂಸಿ ಸಮಿತಿ ಅಧ್ಯಕ್ಷ ರಮೇಶ ಚಂದ್ರ ಲಾಹೋಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





