ಪುತ್ತೂರು, ಕಡಬ ತಾಲೂಕಿನಲ್ಲಿ ಕೋವಿಡ್ ಪ್ರಮಾಣದಲ್ಲಿ ತೀವ್ರ ಏರಿಕೆ
ಮಂಗಳವಾರ 26 ಪಾಸಿಟಿವ್ ಪ್ರಕರಣ ದೃಢ

ಪುತ್ತೂರು, ಜು.28: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬರುತ್ತಿದ್ದು, ಮಂಗಳವಾರ ಒಟ್ಟು 26 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು ಪತ್ತೆಯಾದ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 213ಕ್ಕೆ ಏರಿಕೆಯಾಗಿದೆ.
ಪುತ್ತೂರು ತಾಲೂಕು ವ್ಯಾಪ್ತಿಯ ಪುತ್ತೂರು ನಗರದ ಬಸ್ ನಿಲ್ದಾಣದ ಬಳಿ ಇರುವ ಚಿನ್ನಾಭರಣ ಮಳಿಗೆಯೊಂದರ 24, 33, 27 ಮತ್ತು 37 ವರ್ಷದ ನಾಲ್ವರಲ್ಲಿ ಮಂಗಳವಾರ ಕೊರೋನ ಸೋಂಕು ದೃಢಪಟ್ಟಿದೆ. ಇದೇ ಮಳಿಗೆಯ 6 ಮಂದಿ ಸೋಂಕಿಗೆ ಒಳಗಾಗಿರುವುದು ರವಿವಾರ ಪತ್ತೆಯಾಗಿತ್ತು. ನಗರದ ದರ್ಬೆಯ 29, 26, 29 ವರ್ಷದ ಮೂವರು ಯುವಕರು ಹಾಗೂ 36 ವರ್ಷ ಪ್ರಾಯದ ಮಹಿಳೆ, ಕೆಮ್ಮಿಂಜೆಯ 39 ವರ್ಷದ ಮಹಿಳೆ, 28 ವರ್ಷದ ಯುವಕ, 32 ವರ್ಷದ ಯುವಕ, 38 ವರ್ಷದ ಯುವಕನಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ.
ಕೂರ್ನಡ್ಕದ 56 ವರ್ಷದ ಮತ್ತು 58 ವರ್ಷದ ಇಬ್ಬರು ಪುರುಷರು, ನರಿಮೊಗರಿನ 51 ಮತ್ತು 52 ವರ್ಷದ ಮಹಿಳೆ, ಮಾಡಾವಿನ 53 ವರ್ಷದ ಮಹಿಳೆ, ಶಾಂತಿಗೋಡಿನ 53 ವರ್ಷದ ಮಹಿಳೆ, ಚಿಕ್ಕ ಪುತ್ತೂರಿನ 52 ವರ್ಷದ ಪುರುಷ, ನೆಹರೂ ನಗರದ 54 ವರ್ಷದ ಪುರುಷ, ಆರ್ಯಾಪುವಿನ 22 ಮತ್ತು 18 ವರ್ಷದ ಯುವಕನಲ್ಲಿ ಮತ್ತು 42 ವರ್ಷದ ಮಹಿಳೆಯೊಬ್ಬರು ಸೋಂಕಿಗೆ ಪಾಸಿಟಿವ್ ಆಗಿದ್ದಾರೆ.
ಕಡಬ ತಾಲೂಕಿನ ಕುದ್ಮಾರಿನ 64 ವರ್ಷದ ಮಹಿಳೆ, ಗೋಳಿತ್ತೊಟ್ಟಿನ 50 ವರ್ಷದ ಪುರುಷ, ಕೊಂಬಾರಿನ 21 ವರ್ಷದ ಯುವಕನಲ್ಲಿ ಕೊರೋನ ದೃಢಪಟ್ಟಿದೆ.








