ಯಾವುದೇ ವಿಶೇಷ ತುರ್ತು ಇಲ್ಲದೆ ಅಧಿವೇಶನ ಕರೆಯಲಾಗುವುದಿಲ್ಲ: ರಾಜಸ್ಥಾನ ರಾಜ್ಯಪಾಲ ಕಲ್ ರಾಜ್ ಮಿಶ್ರಾ

ಜೈಪುರ, ಜು.28: ಜುಲೈ 31ರಂದು ಅಧಿವೇಶನ ಕರೆಯಬೇಕೆಂದು ಅಶೋಕ್ ಗೆಹ್ಲೋಟ್ ಸರಕಾರದ ಮನವಿಯನ್ನು ರಾಜಸ್ಥಾನ ರಾಜ್ಯಪಾಲ ಕಲರಾಜ್ ಮಿಶ್ರಾ ಸೋಮವಾರ ವಾಪಸ್ ಕಳುಹಿಸಿದ್ದಾರೆ. ಐದು ದಿನಗಳಲ್ಲಿ ಎರಡನೇ ಬಾರಿ ರಾಜ್ಯಪಾಲರು ಸಿಎಂ ಗೆಹ್ಲೋಟ್ ಮನವಿಯನ್ನು ತಿರಸ್ಕರಿಸಿದ್ದರು.
ಮನವಿ ತಿರಸ್ಕರಿಸಿರುವ ಕುರಿತಂತೆ ಸೋಮವಾರ ಪ್ರತಿಕ್ರಿಯಿಸಿರುವ ಮಿಶ್ರಾ, "ಒಂದು ವೇಳೆ ಸರಕಾರ ವಿಶ್ವಾಸಮತ ಸಾಬೀತುಪಡಿಸಲು ಬಯಸಿದ್ದರೆ, ಅಧಿವೇಶನವನ್ನು ತುರ್ತಾಗಿ ಕರೆಯಲು ಸಮಂಜಸವಾದ ಕಾರಣವಾಗುತ್ತದೆ. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಂದ ವರದಿಯ ಪ್ರಕಾರ ಗೆಹ್ಲೋಟ್ ಸರಕಾರ ವಿಶ್ವಾಸಮತ ಯಾಚಿಸಲು ಸಿದ್ಧ ಎಂದು ಹೇಳಿಕೆ ನೀಡಿದೆ. ಆದರೆ, ಅಧಿವೇಶನ ನಡೆಸಬೇಕೆಂದು ಸಲ್ಲಿಸಿರುವ ಮನವಿಯಲ್ಲಿ ಗೆಹ್ಲೋಟ್ ಈ ಕುರಿತು ನಮೂದಿಸಿಲ್ಲ. ಯಾವುದೇ ವಿಶೇಷ ತುರ್ತು ಪರಿಸ್ಥಿತಿ ಹೊರತುಪಡಿಸಿ ಅಧಿವೇಶನ ಕರೆಯಲಾಗದು'' ಎಂದು ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆಯನ್ನು ಉಲ್ಲೇಖಿಸಿ ಹೇಳಿದರು.
Next Story





