ಉಡುಪಿ ನಗರಸಭೆ ವ್ಯಾಪ್ತಿಯ 42 ಮಂದಿಯಿಂದ ಕ್ವಾರಂಟೇನ್ ನಿಯಮ ಉಲ್ಲಂಘನೆ
ಉಡುಪಿ, ಜು.28: ಕೋವಿಡ್-19ಗೆ ಸಂಬಂಧಿಸಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 42 ಮಂದಿ ಹೋಮ್ ಕ್ವಾರಂಟೇನ್ ನಿಯಮ ಉಲ್ಲಂಘಿಸಿರುವ ಬಗ್ಗೆ ವರದಿಯಾಗಿದೆ.ಈಗಾಗಲೇ ನಿಯಮ ಉಲ್ಲಂಘಿಸಿರುವ 22 ಮಂದಿ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿರುವ ಮತ್ತೆ 20 ಮಂದಿ ವಿರುದ್ಧ ದೂರು ನೀಡಲಾಗುತ್ತದೆ ಎಂದು ನಗರಸಭೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಹಾಗೂ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮೋಹನ್ ರಾಜ್ ಕೆ.ಎಂ. ತಿಳಿಸಿದ್ದಾರೆ.
ಮಣಿಪಾಲ ಠಾಣಾ ವ್ಯಾಪ್ತಿಯ ಮಧುಕರ್ ಶೆಟ್ಟಿ, ಡಾ.ಮಯಾಂಕ್ ಗುಪ್ತ, ಸಂಗಿಕ್ ರಾಯ್, ತೇಜಸ್ ಸಿಂಗ್ ಗ್ರೋವರ್, ಅರುಣ್ ಸತ್ಯನಾರಾಯಣ, ಕೃಷ್ಣಸಾಯಿ ಧನೆಕುಲ, ಎಶಿತಾ ಬಂಸಾಯಿ, ಸಹನಾ, ಮೆರಿನ್, ಸುಮತಿ, ಶ್ರುತಿ, ಸರಳಾ, ರಾಘವೇಂದ್ರ, ಮಹಿಮಾ, ಜಯಶ್ರೀ, ಮೇರಿ, ಗೌತಮ್, ಹೇಮವತಿ, ವೈಷಕ್, ಶಾಹಿನಿ ಶ್ರಿವಾಸ್ತ, ದಿವಾಕರ್ ನಾರಿ, ದಿವ್ಯಾ ಎಂಬವರು ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಗಿರುವುದಾಗಿ ದೂರಲಾಗಿದೆ. ಇವರಲ್ಲಿ ಕನಿಷ್ಠ 50 ಬಾರಿ ಮತ್ತು ಗರಿಷ್ಠ 186 ಬಾರಿ ನಿಯಮ ಉಲ್ಲಂಘಿಸಿದವರು ಸೇರಿದ್ದಾರೆ.







