ವೆನ್ಲಾಕ್ ಆಸ್ಪತ್ರೆಗೆ ಸರಕಾರಿ ನೌಕರರ ಸಂಘದಿಂದ ಕೊಡುಗೆ

ಮಂಗಳೂರು, ಜು.28: ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಇತ್ತೀಚೆಗೆ ಮಾಸ್ಕ್‌ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ಸದಾಶಿವ ಮಾತನಾಡಿ, ಕ್ಲಪ್ತ ಸಮಯದಲ್ಲಿ ಆರೋಗ್ಯದ ಹಿತದೃಷ್ಟಿಯಿಮದ ಮಾಸ್ಕ್‌ಗಳನ್ನು ನೀಡಿರುವುದಕ್ಕೆ ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಚಿರಋಣಿ ಎಂದರು.
ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಕೆ. ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್ ಎಂ.ಎಸ್., ಉಪಾಧ್ಯಕ್ಷರಾದ ಜಗದೀಶ್, ಗಣೇಶ್ ರಾವ್, ದೇವದಾಸ್, ಕ್ರೀಡಾ ಕಾರ್ಯದರ್ಶಿ ಸುಧೀರ್‌ಕುಮಾರ್, ಕಾರ್ಯಕಾರಿ ಸದಸ್ಯೆ ಶಶಿಕಲಾ, ನಿಕಟಪೂರ್ವ ಕಾರ್ಯದರ್ಶಿ ಬಿ.ಶೇಷಪ್ಪ ಮತ್ತಿತರರಿದ್ದರು.
Next Story





