ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ: ಶಾಸಕ ಲಾಲಾಜಿ ಆರ್. ಮೆಂಡನ್
ಪಡುಬಿದ್ರಿ: ಪಕ್ಷ ತನಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಹಿಂದೆಯೂ ನಿಭಾಯಿಸಿದ್ದೇನೆ. ಮುಂದೆಯೂ ಸಿದ್ಧನಿರುವುದಾಗಿ ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದ್ದಾರೆ.
ಸೋಮವಾರ ಹಿಂದುಳಿದ ಆಯೋಗದ ಅಧ್ಯಕ್ಷ ಸ್ಥಾನ ನೀಡಿ ಬಳಿಕ ಹಿಂಪಡೆದ ಮುಖ್ಯಮಂತ್ರಿಗಳ ನಿರ್ಧಾರದ ಬಗ್ಗೆ ಲಾಲಾಜಿ ಆರ್.ಮೆಂಡನ್, ಪಡುಬಿದ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಪ್ರತಿಕ್ರಿಯಿಸಿದರು.
ತಾನು ಹುದ್ದೆಯ ಆಕಾಂಕ್ಷಿಯಲ್ಲ. ತಾನು ಪಕ್ಷದ, ಜನತೆಯ ಸೇವೆಗಳಿಗೆ ಸದಾ ತನ್ನನ್ನು ಅರ್ಪಿಸಿಕೊಂಡಿದ್ದೇನೆ. ಪಕ್ಷದ ತೀರ್ಮಾನಕ್ಕೆ ಸದಾ ಬದ್ಧನಾಗಿದ್ದೇನೆ. ಈಗಾಗಲೇ ಮುಖ್ಯಮಂತ್ರಿಗಳ ಕಚೇರಿಯಿಂದ ದೂರವಾಣಿ ಕರೆಯನ್ನು ತಾನು ಸ್ವೀಕರಿಸಿದ್ದೇನೆ. ಉತ್ತಮ ಅವಕಾಶವನ್ನು ನೀಡಲಾಗುತ್ತದೆ ಎಂದಿದ್ದಾರೆ.
Next Story





