120 ದಿನ ಶಾಲಾ ಕಾರ್ಯನಿರ್ವಹಣೆಯ ಅನುಸಾರ ಪಠ್ಯಗಳ ಕಡಿತ: ರಾಜ್ಯ ಸರಕಾರ ತೀರ್ಮಾನ
ಕರ್ನಾಟಕ ಟೆಕ್ಸ್ಟ್ ಬುಕ್ ವೆಬ್‍ಸೈಟ್‍ನಲ್ಲಿ ಪ್ರಕಟ

ಬೆಂಗಳೂರು, ಜು.28: ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 120 ದಿನಗಳ ಶಾಲಾ ಕಾರ್ಯನಿರ್ವಹಣಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯವನ್ನು ಕಡಿತಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಈ ಕುರಿತು ಕರ್ನಾಟಕ ಟೆಕ್ಸ್ಟ್ ಬುಕ್ ಸೊಸೈಟಿ ವೆಬ್‍ಸೈಟ್‍ನಲ್ಲಿ ಒಂದರಿಂದ ಹತ್ತನೇ ತರಗತಿವರೆಗಿನ ಯಾವ ಯಾವ ವಿಷಯಗಳ ಪಠ್ಯ ಪುಸ್ತಕದಲ್ಲಿ ಯಾವ ಅಧ್ಯಾಯಗಳನ್ನು ಕೈ ಬಿಡಲಾಗಿದೆ ಎಂಬುದನ್ನು ಪ್ರಕಟಿಸಲಾಗಿದೆ. ಇದು 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ಮಾದೇಗೌಡ ಮಾರ್ಗದರ್ಶನದಲ್ಲಿ ಪಠ್ಯಗಳನ್ನು ಕಡಿತಗೊಳಿಸಲಾಗಿದೆ. ಈ ತಂಡದಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘದ ಉಪ ನಿರ್ದೇಶಕ ರಂಗಯ್ಯ, ಶಿಕ್ಷಕಿಯರಾದ ಸುಶೀಲ, ಕೆ.ಟಿ.ನಾಗಮ್ಮ, ಎಚ್.ಜೆ.ಪವಿತ್ರಾ, ಕೆ.ಎನ್.ಜ್ಯೋತಿ, ಶಾಂತಕುಮಾರ್ ಎಚ್.ಎಸ್.ರಶ್ಮಿ, ವೀಣಾ ಕಾರ್ಯನಿರ್ವಹಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
Next Story







