ಕೊರೋನ ವಿರುದ್ಧದ ಹೋರಾಟಕ್ಕೆಂದು 29 ಕೋಟಿ ರೂ. ಪಡೆದು ‘ಲ್ಯಾಂಬೋರ್ಗಿನಿ’ ಕಾರು ಖರೀದಿಸಿದ!

ಫ್ಲೋರಿಡಾ: ಕೊರೋನ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಿಕ್ಕ ಕೋಟ್ಯಾಂತರ ರೂ. ಹಣದಿಂದ ಯುವಕನೊಬ್ಬ ದುಬಾರಿ ‘ಲ್ಯಾಂಬೋರ್ಗಿನಿ’ ಸ್ಪೋರ್ಟ್ಸ್ ಕಾರು ಖರೀದಿಸಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಫ್ಲೋರಿಡಾದ 29 ವರ್ಷದ ಡೇವಿಡ್ ಟಿ ಹೈನ್ಸ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.
ಪೇ ಚೆಕ್ ಪ್ರೊಟೆಕ್ಶನ್ ಪ್ರೋಗ್ರಾಂನಿಂದ ಕೊರೋನ ವೈರಸ್ ಪರಿಹಾರ ಸಾಲವಾಗಿ ಡೇವಿಡ್ ಗೆ 29 ಕೋಟಿ ರೂ. ಲಭಿಸಿತ್ತು. ಆದರೆ ಈತ 2 ಕೋಟಿ ರೂ. ನೀಡಿ ಕಾರು ಮತ್ತಿತರ ಸಾಮಗ್ರಿಗಳನ್ನು ಖರೀದಿಸಿದ್ದಾನೆ.
ಹಲವು ಕಂಪೆನಿಗಳ ಹೆಸರುಗಳನ್ನು ಹೇಳಿ ಡೇವಿಡ್ 13 ಮಿಲಿಯನ್ ಡಾಲರ್ ಹಣಕ್ಕಾಗಿ ಮನವಿ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ವಂಚನೆ ಬೆಳಕಿಗೆ ಬರುತ್ತಲೇ ಈತನನ್ನು ಬಂಧಿಸಲಾಗಿದ್ದು, ಹಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.
Next Story





