ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ: ಕಠಿಣ ಕ್ರಮಕ್ಕೆ ಯುನಿವೆಫ್ ಕರ್ನಾಟಕ ಆಗ್ರಹ
ಮಂಗಳೂರು: ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ನೀಡಿರುವ 'ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರ ಕೊಲೆಗೈಯುವ ಬೆದರಿಕೆಯನ್ನು ಯುನಿವೆಫ್ ಕರ್ನಾಟಕ ಖಂಡಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಅವರ ದಿಢೀರ್ ವರ್ಗಾವಣೆ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿರುವುದರಿಂದ ಅವರನ್ನು ಮತ್ತೆ ದ.ಕ. ಜಿಲ್ಲೆಯಲ್ಲೇ ಮುಂದುವರಿಯುವಂತೆ ತನ್ನ ಆದೇಶವನ್ನು ಪುನರ್ಪರಿಶೀಲಿಸಬೇಕೆಂದು ಸರಕಾರವನ್ನು ಯುನಿವೆಫ್ ಕರ್ನಾಟಕ ಒತ್ತಾಯಿಸಿದೆ.
Next Story





