ಜು.30: ಕೊರೋನ ತಡೆ ಜಾಗೃತಿ, ರೋಗ ನಿರೋಧ ಶಕ್ತಿ ವೃದ್ಧಿಸುವ ಔಷಧಿ ವಿತರಣೆ
ಮಂಗಳೂರು,ಜು.29:ಕರ್ನಾಟಕ ಸರಕಾರ ಆಯುಷ್ ಇಲಾಖೆ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿ ದ್ಯಾಲಯ, ಜನ ಶಿಕ್ಷಣ ಟ್ರಸ್ಟ್, ಬಾಳೆಪುಣಿ ಗ್ರಾಮ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸೆಲ್ಕೋ ಫೌಂಡೇಶನ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬಾಳೆಪುಣಿ ಗ್ರಾ.ಪಂ. ವ್ಯಾಪ್ತಿಯ 2,200 ಕುಟುಂಬಗಳಿಗೆ ಆಯುಷ್ ಆರೋಗ್ಯ ಅರಿವು ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವ 2ನೇ ಸುತ್ತಿನ ಆರ್ಸೆನಿಕ್ ಆಲ್ಬಮ್-30 ಔಷಧಿ ವಿತರಣೆ, ಆರೋಗ್ಯ ಸಲಹೆ ನೀಡುವ ಕಾರ್ಯಕ್ರಮ ಜುಲೈ30, ಬೆಳಗ್ಗೆ 9.30 ರಿಂದ 12.30 ರವರೆಗೆ ವಿವಿಧ ವಿತರಣಾ ಕೇಂದ್ರಗಳಲ್ಲಿ ನಡೆಯಲಿದೆ.
ಔಷಧಿ ವಿತರಣಾ ಕೇಂದ್ರಗಳು ಈ ಕೆಳಗಿನಂತಿದೆ.
1. ಜನ ಶಿಕ್ಷಣ ಟ್ರಸ್ಟ್ ಸೇವಾ ಕೇಂದ್ರ, ಮುಡಿಪು 2. ಅಂಬೇಡ್ಕರ್ ಭವನ, ಹೂಹಾಕುವಕಲ್ಲು 3. ಶ್ರೀ ವೈದ್ಯನಾಥ ಸಭಾಭವನ, ಕಣಂತೂರು 4. ಮುದುಂಗಾರು ಕಟ್ಟೆ ಶಾಲಾ ವಠಾರ 5. ಮೂಳೂರು ಶಾಲಾ ವಠಾರದಲ್ಲಿ ನಡೆಯಲಿದೆ.
ಮಾಸ್ಕ್ ಬಳಕೆ ಕಡ್ಡಾಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





