ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಟ್ರಸ್ಟ್ ರಚಿಸಿದ ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್

ಹೊಸದಿಲ್ಲಿ: ಅಯೋಧ್ಯೆಯ ಧನ್ನಿಪುರ್ ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷ ಝಫರ್ ಅಹ್ಮದ್ ಫಾರೂಕಿ ಟ್ರಸ್ಟ್ ಒಂದನ್ನು ಘೋಷಿಸಿದ್ದಾರೆ.
“ಮಸೀದಿ, ಇಂಡೋ-ಇಸ್ಲಾಮಿಕ್ ರಿಸರ್ಚ್ ಸೆಂಟರ್, ಗ್ರಂಥಾಲಯ ಮತ್ತು ಆಸ್ಪತ್ರೆ ನಿರ್ಮಾಣವನ್ನು ಈ ಟ್ರಸ್ಟ್ ನಿರ್ವಹಿಸಲಿದೆ” ಎಂದು ಅವರು ಹೇಳಿದ್ದಾರೆ.
“ಟ್ರಸ್ಟ್ ನಲ್ಲಿ 15 ಸದಸ್ಯರಿರಲಿದ್ದಾರೆ. ಈಗಾಗಲೇ 9 ಜನರ ಹೆಸರನ್ನು ಘೋಷಿಸಲಾಗಿದೆ” ಎಂದವರು ಹೇಳಿದರು.
ಧನ್ನಿಪುರ್ ಅಯೋಧ್ಯೆ ಪಟ್ಟಣದಿಂದ 30 ಕಿ.ಮೀ. ದೂರದಲ್ಲಿದೆ.
Next Story





