ಉಡುಪಿ: ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ; 1,15,800ರೂ. ದಂಡ ವಸೂಲಿ
ಉಡುಪಿ, ಜು.29: ಉಡುಪಿ ಜಿಲ್ಲೆಯಲ್ಲಿ ಜು.28ರಂದು ಮಾಸ್ಕ್ ಧರಿಸದ ಹಾಗೂ ಸುರಕ್ಷಿತ ಅಂತರ ಪಾಲಿಸದಿರುವ ಬಗ್ಗೆ 4000ರೂ. ಸೇರಿದಂತೆ ಈವರೆಗೆ ಒಟ್ಟು 1,15,800ರೂ. ದಂಡವನ್ನು ವಸೂಲಿ ಮಾಡಲಾಗಿದೆ.
ಉಡುಪಿ ನಗರಸಭೆ, ಕಾಪು, ಕುಂದಾಪುರ, ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜು.28ರಂದು 900 ಸಹಿತ ಈವರೆಗೆ ಒಟ್ಟು 76200ರೂ. ಮತ್ತು ಉಡುಪಿ, ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರ, ಹೆಬ್ರಿ, ಬೈಂದೂರು ಗ್ರಾಮಾಂತರ ಪ್ರದೇಶಗಳಲ್ಲಿ ಜು.28ರಂದು 3100ರೂ. ಸೇರಿದಂತೆ ಒಟ್ಟು 39600ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





