ಉಡುಪಿ: ‘ಹಿರಿಯ ಸಿರಿ’ ಕಾಲೇಜು ವಾರ್ಷಿಕ ಸಂಚಿಕೆ ಬಿಡುಗಡೆ
ಉಡುಪಿ, ಜು.29: ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ವಾರ್ಷಿಕ ಸಂಚಿಕೆ ಹಿರಿಯ ಸಿರಿ ಹಾಗೂ ಪ್ರಥಮ ಆವೃತ್ತಿಯ ಸುದ್ದಿ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ವಾರ್ಷಿಕ ಸಂಚಿಕೆಯನ್ನು ಕಾಪು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಾಲಾಜಿ.ಆರ್.ಮೆಂಡನ್ ಉದ್ಘಾಟಿಸಿದರು. ಪ್ರಥಮ ಆವೃತ್ತಿಯ ಸುದ್ದಿ ಪತ್ರಿಕೆಯನ್ನು ಶಿಕ್ಷಣ ತಜ್ಞ ಡಾ.ಎನ್.ಎಸ್.ಶೆಟ್ಟಿ ಬಿಡುಗಡೆಗೊಳಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯೆ ಸಂಧ್ಯಾ ಕಾಮತ್, ಕಾಲೇಜು ವಾರ್ಷಿಕ ಸಂಚಿಕೆಯ ಸಂಪಾದಕಿ ಸುಜಯಾ ಕೆ, ಐಕ್ಯೂಎಇ ಸಂಚಾಲಕಿ ಸುಮನಾ ಬಿ., ಕಾಲೇಜು ಅಭಿವೃದ್ಧಿ ಅಮಿತಿ ಸದಸ್ಯರು, ಬೋಧಕ ಬೋಧತೇತರ ಸಿಬ್ಬಂದಿ ಉಪಸ್ಥಿತರಿದ್ದರು.
Next Story





