ಕೆಟ್ಟ ಸಾಲಗಳ ಏರಿಕೆಯಿಂದ ಜಪಾನ್ ರೀತಿಯ’ ಅಪಾಯದಲ್ಲಿ ಭಾರತ: ಆರ್‌ಬಿಐ ಮಾಜಿ ಡೆಪ್ಯುಟಿ ಗವರ್ನರ್

ಹೊಸದಿಲ್ಲಿ, ಜು. 29: ಕೆಟ್ಟ ಸಾಲಗಳ ಏರಿಕೆಯಿಂದ ಭಾರತವು ಜಪಾನ್ 1990ರಲ್ಲಿ ಎದುರಿಸಿದ ಆರ್ಥಿಕ ಮುಗ್ಗಟ್ಟನ್ನು ಎದುರಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಹೇಳಿದ್ದಾರೆ.
ಕೆಟ್ಟ ಸಾಲಗಳು ಶೇ. 12.15 ಏರಿಕೆಯಾಗಲಿದೆ ಎಂದು ಕಳೆದ ವರ್ಷ ಆರ್‌ಬಿಐಗೆ ರಾಜೀನಾಮೆ ನೀಡಿದ್ದ ವಿರಲ್ ಆಚಾರ್ಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಭಾರತ ‘ಜಪಾನೀಕರಣ’ (ಜಪಾನಿನಂತೆ ಆರ್ಥಿಕ ಮುಗ್ಗಟ್ಟು)ಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ವಿಚಾರ. ಇದರಿಂದ ಹೊರಬರಲು ಹಣಕಾಸು ಮಧ್ಯವರ್ತಿ ವಲಯದಲ್ಲಿ ಬಂಡವಾಳ ಹೂಡಿ ಹೆಚ್ಚಿಸಬೇಕು. ಅದಕ್ಕೆ ಇದು ಉತ್ತಮ ಸಮಯ ಎಂದು ಅವರು ಹೇಳಿದರು.
ದುರ್ಬಲ ಬ್ಯಾಂಕಿಂಗ್ ಹಾಗೂ ಹಣಕಾಸು ವಲಯದ ದುರ್ಬಲ ಚಟುವಟಿಕೆ ಜಪಾನ್‌ನಲ್ಲಿ 1990ರಲ್ಲಿ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಯಿತು ಎಂದು ಅವರು ಹೇಳಿದರು.
ದೇಶದ ಕೆಟ್ಟ ಸಾಲ ಕಳೆದ ಎರಡು ದಶಕದಲ್ಲಿ 2021 ಮಾರ್ಚ್ ನಲ್ಲಿ ಅತಿ ಹೆಚ್ಚು ಶೇ. 12.5ಕ್ಕೆ ಏರಿಕೆಯಾಗಲಿದೆ ಇದು 1999ರ ನಂತರ ಅತಿ ಹೆಚ್ಚು ಎಂದು ಅವರು ವಿರಳ್ ಆಚಾರ್ಯ ಹೇಳಿದ್ದಾರೆ.





