ಉಳ್ಳಾಲ: ಬುಧವಾರ ಕೊರೋನ ಪಾಸಿಟಿವ್ ಪ್ರಕರಣಗಳಿಲ್ಲ
ಉಳ್ಳಾಲ, ಜು.29: ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಬುಧವಾರ ಯಾವುದೇ ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಆದರೆ ಕೋಟೆಕಾರು ಪಟ್ಟಣ ಪಂಚಾಯತ್ ಹಾಗೂ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ತಲಾ ಎರಡು ಸೋಂಕು ಪ್ರಕರಣಗಳು ದೃಢಪಟ್ಟಿದೆ.
ಕೋಟೆಕಾರು ಪಪಂ ವ್ಯಾಪ್ತಿಯ ಹಿದಾಯತ್ ನಗರದಲ್ಲಿ 24 ವರ್ಷದ ಮಹಿಳೆ, ಕೋಟೆಕಾರಿನಲ್ಲಿ 29 ವರ್ಷದ ಪುರುಷರೊಬ್ಬರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲದಲ್ಲಿ 43 ವರ್ಷದ ಮಹಿಳೆ, 76 ವರ್ಷದ ವೃದ್ಧರೊಬ್ಬರು ಕೊರೋನಕ್ಕೆ ಪಾಸಿಟಿವ್ ಆಗಿದ್ದಾರೆ.
ತಲಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ 3, ಹರೇಕಳ ಗ್ರಾಮ ಮತ್ತು ದೇರಳಕಟ್ಟೆಯಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರೊಂದಿಗೆ ಉಳ್ಳಾಲ ಸುತ್ತಮುತ್ತ ದೃಢಪಟ್ಟ ಸೋಂಕಿತರ ಒಟ್ಟು ಸಂಖ್ಯೆ 491ಕ್ಕೇರಿದೆ.
Next Story