ಸ್ವಯಂಪ್ರೇರಿತವಾಗಿ ಐಸೋಲೇಷನ್‌ಗೆ ಒಳಗಾದ ತಮಿಳುನಾಡು ರಾಜ್ಯಪಾಲ

ಚೆನ್ನೈ, ಜು. 29: ತಮಿಳುನಾಡು ರಾಜಭವನದ ಮತ್ತೆ ಮೂವರಿಗೆ ಕೊರೋನ ಸೋಂಕು ದೃಢಪಟ್ಟ ಬಳಿಕ ವೈದ್ಯರ ಸಲಹೆಯಂತೆ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಒಂದು ವಾರಗಳ ಕಾಲ ಸ್ವಯಂಪ್ರೇರಿತವಾಗಿ ಪ್ರತ್ಯೆಕವಾಗಿ (ಐಸೋಲೇಶನ್) ಇದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ರಾಜಭವನದ 38 ಮಂದಿ ಕಳೆದ ವಾರ ಕೊರೋನ ಪರೀಕ್ಷೆಗೆ ಒಳಗಾಗಿದ್ದರು. ಇವರಲ್ಲಿ ಮೂವರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಈ ಮೂವರನ್ನು ಆರೋಗ್ಯ ಇಲಾಖೆಯ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಮಂಗಳವಾರ ರಾಜಭವನದ ವೈದ್ಯಕೀಯ ಅಧಿಕಾರಿ ರಾಜ್ಯಪಾಲರಿಗೆ ಎಂದಿನಂತೆ ಆರೋಗ್ಯ ತಪಾಸಣೆ ನಡೆಸಿದ್ದಾರೆ ಹಾಗೂ ಅವರು ಆರೋಗ್ಯಯತವಾಗಿ ಹಾಗೂ ಸುದೃಢವಾಗಿ ಇದ್ದಾರೆ ಎಂದು ಹೇಳಿದ್ದಾರೆ. ಆದರೂ, 7 ದಿನಗಳ ಕಾಲ ಪ್ರತ್ಯೇಕವಾಗಿ ಇರುವಂತೆ ವೈದ್ಯರು ಪುರೋಹಿತ್ ಅವರಿಗೆ ಸಲಹೆ ನೀಡಿದ್ದಾರೆ. ವೈದ್ಯರ ಈ ಸಲಹೆ ಹಿನ್ನೆಲೆಯಲ್ಲಿ ಪುರೋಹಿತ್ ಅವರು ಸ್ವಯಪ್ರೇರಿತವಾಗಿ ಪ್ರತ್ಯೆಕವಾಗಿ (ಐಸೋಲೇಶನ್) ಇದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.





