ಖಂಡಿತವಾಗಿಯೂ ನಾವು ಅಧಿವೇಶನದಲ್ಲಿ ಭಾಗವಹಿಸುತ್ತೇವೆ ಎಂದ ಸಚಿನ್ ಪೈಲಟ್ ಬಣದ ಶಾಸಕ

ಜೈಪುರ/ಹೊಸದಿಲ್ಲಿ,ಜು.30: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹಲವು ಮನವಿಗಳ ಬಳಿಕ ಬುಧವಾರ ರಾತ್ರಿ ರಾಜಸ್ಥಾನ ರಾಜ್ಯಪಾಲ ಕಲರಾಜ್ ಮಿಶ್ರಾ ಕೊನೆಗೂ ಆಗಸ್ಟ್ 14ರಿಂದ ಅಧಿವೇಶನ ನಡೆಸಲು ಅನುಮತಿ ನೀಡಿದ್ದಾರೆ. ಇದೀಗ ಹರ್ಯಾಣದಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್‌ನ ಬಂಡಾಯ ಶಾಸಕರು ಅಧಿವೇಶನದಲ್ಲಿ ಭಾಗವಹಿಸಲಿರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ ಬಳಿಕ ಮೊದಲ ಬಾರಿ ತಾವು ಜೈಪುರಕ್ಕೆ ವಾಪಸಾಗಲು ಭದ್ರತೆ ಒದಗಿಸಬೇಕೆಂದು ಸಚಿನ್ ಪೈಲಟ್ ಹಾಗೂ 18 ಬಂಡಾಯ ಶಾಸಕರು ಬೇಡಿಕೆ ಇಟ್ಟಿರುವುದ ಚರ್ಚಾಸ್ಪದ ವಿಚಾರವಾಗಿದೆ.
ಓರ್ವ ಬಂಡಾಯ ಶಾಸಕರಲ್ಲಿ ಅಧಿವೇಶನದಲ್ಲಿ ಭಾಗವಹಿಸುತ್ತೀರಾ ಎಂದು ಕೇಳಿದಾಗ, "ಖಂಡಿತವಾಗಿಯೂ ನಾವು ಅಧಿವೇಶನದಲ್ಲಿ ಭಾಗವಹಿಸಲಿದ್ದೇವೆ'' ಎಂದು ಉತ್ತರಿಸಿದರು.
ಬಂಡಾಯ ಶಾಸಕರು ಯಾವಾಗ ಜೈಪುರಕ್ಕೆ ವಾಪಸಾಗುತ್ತಾರೆ ಎಂಬ ಕುರಿತು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಒಂದು ವೇಳೆ ಬಂಡಾಯ ಶಾಸಕರು ಅಧಿವೇಶನದಲ್ಲಿ ಭಾಗವಹಿಸದೇ ಇದ್ದರೆ ಸ್ವಯಂಆಗಿ ಅನರ್ಹಗೊಳ್ಳಲಿದ್ದಾರೆ. ಅನರ್ಹತೆ ಮುಂದಾಗಿರುವ ಸ್ಪೀಕರ್ ಸಿಪಿ ಜೋಶಿಯ ವಿರುದ್ಧ ಬಂಡಾಯ ಶಾಸಕರು ಪ್ರಸ್ತುತ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.







