ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ: ಆಕಾಶ್ ಶೆಟ್ಟಿಗೆ ಪ್ರಥಮ ಬಹುಮಾನ

ಉಡುಪಿ, ಜು.30: ಹಿರಿಯಡಕದ ಸಂಸ್ಕೃತಿ ಸಿರಿ ಟ್ರಸ್ಟ್, ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 'ಕೊರೋನ ಲಾಕ್‌ಡೌನ್‌ನ ಸಿಹಿ ನೆನಪುಗಳು' ವಿಷಯದ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ. ವಿದ್ಯಾರ್ಥಿ ಆಕಾಶ್ ಶೆಟ್ಟಿ ಪೆರ್ಡೂರು ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ.
ಅದೇ ಕಾಲೇಜಿನ ದಿವ್ಯಾ ನೀರೆಬೈಲೂರು ಹಾಗೂ ಎ.ಎಸ್.ದಿವ್ಯಾ ಪೆರ್ಡೂರು ದ್ವಿತೀಯ ಬಹುಮಾನಗಳನ್ನೂ, ಶ್ರೀಧರ ಕುಕ್ಕೆಹಳ್ಳಿ ಹಾಗೂ ದಿಶಾ ಪೆರ್ಣಂಕಿಲ ಪ್ರೋತ್ಸಾಹಕ ಬಹುಮಾನಗಳನ್ನು ಪಡೆದಿದ್ದಾರೆ ಎಂದು ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Next Story





