ರಫೆಲ್ ಯುದ್ಧ ವಿಮಾನ: ರಾಷ್ಟಧ್ವಜ ಪ್ರದರ್ಶಿಸಿ ಸಂಭ್ರಮಾಚರಣೆ

ಉಡುಪಿ, ಜು.30: ರೆಫೆಲ್ ಯುದ್ಧ ವಿಮಾನ ಖರೀದಿ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ ಕಾರ್ಯಕ್ರಮವು ನಗರದ ಮಾರುಥಿ ವೀಥಿಕಾದಲ್ಲಿ ಗುರುವಾರ ನಡೆಯಿತು.
ಈ ಸಂದರ್ಭದಲ್ಲಿ ಬೃಹತ್ ಗಾತ್ರದ ರಾಷ್ಟಧ್ವಜ ಪ್ರದರ್ಶಿಸುವ ಮೂಲಕ ದೇಶದ ಸಾಧನೆಗೆ ಗೌರವ ಸಮರ್ಪಿಸಲಾಯಿತು. ಉಡುಪಿ ಸ್ವಿಟ್ಸ್ ಕಲ್ಸಂಕ ಮಳಿಗೆಯ ಸಿಹಿ ಖಾದ್ಯ ತಯಾರಕರ ತಂಡವು ಸ್ಥಳದಲ್ಲಿ ತಯಾರಿಸಿದ ಬಿಸಿ ಬಿಸಿ ಜಿಲೇಬಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು, ಪದಾಧಿಕಾರಿ ಗಳಾದ ಕೆ.ಬಾಲಗಂಗಾಧರ ರಾವ್, ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾ ಧ್ಯಾಯ, ತಾರಾನಾಥ್ ಮೇಸ್ತ ಶಿರೂರು, ಮುಹಮ್ಮದ್, ಸುಧಾಕರ ಶೆಟ್ಟಿ, ರಾಜೇಶ್ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
Next Story





