ಜಾಲತಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯರ ಫೋಟೋ ಹರಿಬಿಟ್ಟ ಆರೋಪ: ಟೆಕ್ಕಿಗಳಿಬ್ಬರ ಬಂಧನ
![ಜಾಲತಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯರ ಫೋಟೋ ಹರಿಬಿಟ್ಟ ಆರೋಪ: ಟೆಕ್ಕಿಗಳಿಬ್ಬರ ಬಂಧನ ಜಾಲತಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯರ ಫೋಟೋ ಹರಿಬಿಟ್ಟ ಆರೋಪ: ಟೆಕ್ಕಿಗಳಿಬ್ಬರ ಬಂಧನ](https://www.varthabharati.in/sites/default/files/images/articles/2020/07/30/253215-1596125285.jpg)
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.30: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಟೆಕ್ಕಿಗಳಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಸಿವಿ ರಾಮನ್ ನಗರದ ಅಜಯ್ ತನಿಕಾಚಲಂ (37) ಹಾಗೂ ರಾಜಾಜಿನಗರದ ವಿಶ್ವಕ್ ಸೇನ್ (27) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ನಗರದ ಪ್ರಮುಖ ಕಾಲೇಜಿನ ವಿದ್ಯಾರ್ಥಿನಿಯರ, ಉಪನ್ಯಾಸಕಿಯರ ಹಾಗೂ ಹಳೇ ವಿದ್ಯಾರ್ಥಿನಿಯರ ಫೋಟೋಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಿಂದ ಕದ್ದು ಅನಧಿಕೃತವಾಗಿ ಅಶ್ಲೀಲ ಜಾಲತಾಣಗಳಿಗೆ ಆರೋಪಿಗಳು ಅಪ್ಲೋಡ್ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಲ್ಯಾಪ್ಟಾಪ್, ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
Next Story