ದ.ಕ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮತ್ತೆ ಐವರು ಬಲಿ: 204 ಪಾಸಿಟಿವ್
ಮಂಗಳುರು, ಜು.31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡಾ 5 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. 204 ಮಂದಿಯಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ.
ಮಂಗಳೂರು ನಿವಾಸಿಗಳಾದ 47, 63 ಹಾಗೂ 75 ವರ್ಷದ ಮೂವರು ಪುರುಷರು ಹಾಗೂ ಬಂಟ್ವಾಳದ 76 ವರ್ಷದ ಓರ್ವ ಪುರುಷ ಹಾಗೂ ದಾವಣಗೆರೆಯ 88 ವರ್ಷದ ವೃದ್ಧ ಮಹಿಳೆ ಸಾವಿಗೀಡಾಗಿದ್ದಾರೆ.
ಇಂದು ಮತ್ತೆ 204 ಮಂದಿಗೆ ಕೊರೋನ ದೃಢಪಟ್ಟಿದ್ದು, ಪ್ರಾಥಮಿಕ ಸಂಪರ್ಕದಿಂದ 75 ಮಂದಿಗೆ ಕೊರೋನ ಪಾಸಿಟಿವ್ ಬಂದಿದೆ. ILI ಪ್ರಕರಣದಿಂದ 63 ಮಂದಿಗೆ, ಸಂಪರ್ಕವೇ ಪತ್ತೆಯಾಗದ 52 ಮಂದಿಗೆ, SARI ಪ್ರಕರಣದಿಂದ 14 ಮಂದಿಗೆ ಕೊರೋನ ಪಾಸಿಟಿವ್ ಬಂದಿದೆ.
Next Story