ರಾಜ್ಯದಲ್ಲಿ ಕೊರೋನ ಸೋಂಕಿಗೆ ಮತ್ತೆ 98 ಬಲಿ; ಸಾವಿನ ಸಂಖ್ಯೆ 2,412ಕ್ಕೆ ಏರಿಕೆ
ಇದುವರೆಗೆ 50 ಸಾವಿರಕ್ಕೂ ಅಧಿಕ ಮಂದಿ ಗುಣಮುಖ
ಬೆಂಗಳೂರು, ಆ.1: ರಾಜ್ಯದಲ್ಲಿ ಕೆಲದಿನಗಳಿಂದ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿದೆ. ದೈನಂದಿನ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಇಂದು ಮತ್ತೆ 5 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 1.29 ಲಕ್ಷದ ಗಡಿ ದಾಟಿದೆ.
ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಮತ್ತೆ 5,172 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,29,287ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 98 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 2412ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 27 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರು 9, ಧಾರವಾಡ 8, ದಕ್ಷಿಣ ಕನ್ನಡ 8, ಉಡುಪಿ 6, ಕಲಬುರಗಿ 5, ಬೆಳಗಾವಿ, ಬೀದರ್, ದಾವಣಗೆರೆ, ಶಿವಮೊಗ್ಗದಲ್ಲಿ ತಲಾ 4, ಚಿತ್ರದುರ್ಗ ಮತ್ತು ಯಾದಗಿರಿಯಲ್ಲಿ ತಲಾ 3, ಕೊಪ್ಪಳ, ತುಮಕೂರು, ಗದಗ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ 2, ಮಂಡ್ಯ, ಬಳ್ಳಾರಿ, ವಿಜಯಪುರ, ಚಿಕ್ಕಬಳ್ಳಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1,852, ಮೈಸೂರು 365, ಬಳ್ಳಾರಿ 269, ಕಲಬುರಗಿ 219, ಬೆಳಗಾವಿ 219, ಧಾರವಾಡ 184, ಹಾಸನ 146, ದಕ್ಷಿಣ ಕನ್ನಡ 139, ಉಡುಪಿ 136, ಬಾಗಲಕೋಟೆ 134, ವಿಜಯಪುರ 129, ಶಿವಮೊಗ್ಗ 119, ರಾಯಚೂರು 109, ದಾವಣಗೆರೆ 108, ಕೊಪ್ಪಳ 107, ತುಮಕೂರು 99, ಗದಗ 99, ಮಂಡ್ಯ 95, ಬೆಂಗಳೂರು ಗ್ರಾಮಾಂತರ 93, ಚಿಕ್ಕಬಳ್ಳಾಪುರ 72, ಚಿತ್ರದುರ್ಗ 60, ಚಿಕ್ಕಮಗಳೂರು 57, ಬೀದರ್ 52, ಹಾವೇರಿ 52, ಉತ್ತರ ಕನ್ನಡ 51, ರಾಮನಗರ 51, ಚಾಮರಾಜನಗರ 43, ಯಾದಗಿರಿ 39, ಕೋಲಾರ 39, ಕೊಡಗು ಜಿಲ್ಲೆಯಲ್ಲಿ 35 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 1,29,287 ಕೊರೋನ ಸೋಂಕಿತರ ಪೈಕಿ 53,648 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 3,860 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 2,412 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 73,219 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.