ಉಡುಪಿ: ಆ.2ರಂದು ‘ಸಂಡೇ ಲಾಕ್ಡೌನ್’ ಇಲ್ಲ
ಉಡುಪಿ, ಆ.1: ರಾಜ್ಯಾದ್ಯಂತ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂ ಹಾಗೂ ರವಿವಾರ ಸಂಪೂರ್ಣ ಲಾಕ್ಡೌನ್ ಜು.31ಕ್ಕೆ ಮುಕ್ತಾಯ ಗೊಂಡಿರುವುದರಿಂದ ಆ.2ರಂದು ಜಿಲ್ಲೆಯಲ್ಲಿ ಲಾಕ್ಡೌನ್ ಇರುವುದಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಬಸ್ ಸೇವೆಯೂ ಸೇರಿದಂತೆ ರವಿವಾರ ಎಂದಿನಂತೆ ಎಲ್ಲವೂ ಕಾರ್ಯ ನಿರ್ವಹಿಸಲಿವೆ. ರಾತ್ರಿಯ ಕರ್ಫ್ಯೂ ಕೂಡಾ ಇರುವುದಿಲ್ಲ.ಆದರೆ ಜಿಲ್ಲೆಯ ಕಂಟೈನ್ಮೆಂಟ್ ವಲಯಗಳಲ್ಲಿ ಎಂದಿನಂತೆ ಸಂಪೂರ್ಣ ಲಾಕ್ಡೌನ್ ಮುಂದುವರಿಯಲಿದೆ ಎಂದು ಮೂಲ ತಿಳಿಸಿದೆ.
Next Story