‘ಕೊರೋನ ಕಾಲ; ಜೀವನಾನುಭವ ಕಥನ’-ಲೇಖನ ಆಹ್ವಾನ
ಮಂಗಳೂರು, ಆ.1: ನಮ್ಮೀ ಕಾಲಘಟ್ಟದ ವಿಶ್ವದ ವಿಶಿಷ್ಟ ವಿದ್ಯಮಾನ ಪ್ರಕ್ರಿಯೆಗಳನ್ನು ದಾಖಲೀಕರಣಗೊಳಿಸಿ ಮುಂದಿನ ಜನಾಂಗದ ಅರಿವು ಮತ್ತು ಚಿಂತನೆಗಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೊರೋನ ಅನುಭವವನ್ನು ಲೇಖನ ರೂಪದಲ್ಲಿ ಆಹ್ವಾನಿಸಿದೆ.
ಕೇಂದ್ರ ಸರಕಾರ ವಿಧಿಸಿದ ಜನತಾ ಕರ್ಫ್ಯೂ ಹಾಗು ಲಾಕ್‌ಡೌನ್ ಸಂದರ್ಭ ನೀವು ಅನುಭವಿಸಿರುವ ಕೌಟುಂಬಿಕ, ಧಾರ್ಮಿಕ, ವೈಯಕ್ತಿಕ ಹಾಗು ಸಾರ್ವಜನಿಕ ಅನುಭವ, ಚಿಂತನೆ ಹಾಗೂ ಆಡಳಿತ ವ್ಯವಸ್ಥೆಯ ಕಾರ್ಯವೈಖರಿ, ಆರೋಗ್ಯವೀರರು ಸ್ಪಂದಿಸಿದ ರೀತಿಯನ್ನು ಲೇಖನ ರೂಪಕ್ಕೆ ತರಬಹುದಾಗಿದೆ.
ಲೇಖನಗಳು ಕನ್ನಡ, ತುಳು, ಕೊಂಕಣಿ, ಬ್ಯಾರಿ, ಇಂಗ್ಲಿಷ್ ಭಾಷೆಗಳಲ್ಲಿ ಎ-4 ಸೈಜಿನ ಹಾಳೆಗಳಲ್ಲಿ 10 ಪುಟಗಳಿಗೆ ಮೀರದಂತೆ ಬರೆದು, ಅಧ್ಯಕ್ಷರು-ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ kalkuraadvt@gmail.comಗೆ ಇಮೇಲ್ ಮೂಲಕ ಆ.10ರೊಳಗೆ ತಲಪುವಂತೆ ಕಳುಹಿಸಬೇಕು.
7ನೇ ತರಗತಿವರೆಗಿನ ಕಿರಿಯರ ವಿಭಾಗ, 8ರಿಂದ 10ನೆ ತರಗತಿವರೆಗಿನ ಪ್ರೌಢ ವಿಭಾಗ, ಕಾಲೇಜು ವಿಭಾಗ ಹಾಗು ಮುಕ್ತ ವಿಭಾಗ ಹೀಗೆ ಒಟ್ಟು 4 ವಿಭಾಗಗಳಲ್ಲಿ ಲೇಖನಗಳನ್ನು ಆಹ್ವಾನಿಸಲಾಗಿದ್ದು ಆಯ್ಕೆಗೊಂಡ ‘ಪ್ರಬಂಧ’ ಗಳಿಗೆ ಗೌರವ ಬಹುಮಾನ ನೀಡಲಾಗುವುದೆಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







