ಉಳ್ಳಾಲ : ಅವ್ಯವಸ್ಥೆಯ ಕಾಮಗಾರಿ ವಿರುದ್ಧ ಪ್ರತಿಭಟನೆ

ಉಳ್ಳಾಲ : ನಗರಸಭಾ ವ್ಯಾಪ್ತಿಯ ಮಿಲ್ಲತ್ ನಗರ, ಮೇಲಂಗಡಿ, ಬಂಡಿಕೋಟ್ಯಾ ಪ್ರದೇಶಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಅವ್ಯವಸ್ಥೆಯಿಂದ ಕೂಡಿರುವ ರಸ್ತೆ, ಚರಂಡಿ, ಒಳಚರಂಡಿ ಸಮಸ್ಯೆ ಗಳನ್ನು ಶೀಘ್ರದಲ್ಲೇ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ಉಳ್ಳಾಲ ನಾಗರಿಕ ಹೋರಾಟ ಸಮಿತಿ ವತಿಯಿಂದ ಬುಧವಾರ ಉಳ್ಳಾಲ ದರ್ಗಾ ಗೇಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ಮುಖಂಡ ಅಕ್ರಮ್ ಹಸನ್ , ಇಲ್ಲಿನ ಕಾಮಗಾರಿ ವಿಚಾರ ದಲ್ಲಿ ಬಹಳಷ್ಟು ರಾಜಕೀಯ ನಡೆಯುತ್ತಿದೆ. ಇದರಿಂದ ಜನರು ಸಂಕಷ್ಟಕೀಡಾಗಿದ್ದಾರೆ. ಶಾಸಕರು ಕೇವಲ ಭರವಸೆ ಮಾತ್ರ ನೀಡುತ್ತಾರೆ ಹೊರತು ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು.15 ನೇ ಹಣಕಾಸು ಯೋಜನೆಯಡಿ ನಗರಸಭೆ ಗೆ ಎರಡು ಕೋಟಿ ಬಿಡುಗಡೆ ಆಗಿದ್ದರೂ ಕೂಡ ಜನಪರ ಕೆಲಸ ಆಗುತ್ತಿಲ್ಲ.ಈ ಬಗೆ ಸಂಬಂಧ ಪಟ್ಟ ಮೇಲಧಿಕಾರಿಗಳು ಗಮನಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಎಂ.ಆರ್ ಅಬ್ಬಾಸ್, ಜಾಕೀರ್ ಉಳ್ಳಾಲ ಮಾತನಾಡಿದರು. ಕೌನ್ಸಿಲರ್ ಗಳಾದ ಜಬ್ಬಾರ್, ಖಲೀಲ್, ಬಶೀರ್ ಕಡಪುರ, ಇಕ್ಬಾಲ್ ಕೋಟೆ ಪುರ, ಮಾಜಿ ಕೌನ್ಸಿಲರ್ ಗೋಪಾಲ, ಅಂತೋನಿ, ರೇಖಾ, ಸುನಿಲ್, ನಿಜಾಂ ಉಳ್ಳಾಲ, ರಝಾಕ್ ಮಿಲ್ಲತ್ ನಗರ, ಮೋಹನ್, ಸುಹೈಲ್ ಮೊದಲಾದವರು ಉಪಸ್ಥಿತರಿದ್ದರು





