ಹಿರಿಯ ಪತ್ರಕರ್ತ ಸುಶ್ಮಿತ್ ಕುಮಾರ್ ನಿಧನ
ಮಂಗಳೂರು, ಆ. 3: ಹಿರಿಯ ಪತ್ರಕರ್ತ ಸುಶ್ಮಿತ್ ಕುಮಾರ್ (39) ಅವರು ಯೆಯ್ಯಿಡಿಯ ತನ್ನ ನಿವಾಸದಲ್ಲಿ ದೀರ್ಘ ಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಕಳೆದ 12 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿದ್ದರು. ಹೊಸದಿಗಂತ, ಜಯಕಿರಣ ಪತ್ರಿಕೆಗಳಲ್ಲಿ ಹಾಗೂ ದಾಯ್ಜಿವರ್ಲ್ಡ್, ಸಿ ಆ್ಯಂಡ್ ಸೇ ವೆಬ್ಸೈಟ್ಗಳಲ್ಲ್ಲಿ ಸೇವೆ ಸಲ್ಲಿಸಿದ್ದರು.
Next Story