Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಖ್ಯಾತ ರಂಗಕರ್ಮಿ ಇಬ್ರಾಹೀಂ ಅಲ್ಕಾಝಿ...

ಖ್ಯಾತ ರಂಗಕರ್ಮಿ ಇಬ್ರಾಹೀಂ ಅಲ್ಕಾಝಿ ನಿಧನ

ವಾರ್ತಾಭಾರತಿವಾರ್ತಾಭಾರತಿ4 Aug 2020 11:01 PM IST
share

ಹೊಸದಿಲ್ಲಿ, ಆ.4: ಆಧುನಿಕ ರಂಗಭೂಮಿಯ ಜನಕರೆಂದೇ ಪರಿಗಣಿಸಲಾಗಿರುವ,ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ)ದ ಪ್ರಪ್ರಥಮ ನಿರ್ದೇಶಕರಾಗಿದ್ದ ಖ್ಯಾತ ರಂಗಕರ್ಮಿ ಇಬ್ರಾಹೀಂ ಅಲ್ಕಾಝಿ(94) ಅವರು ಮಂಗಳವಾರ ಇಲ್ಲಿ ನಿಧನರಾದರು.

ರಂಗಭೂಮಿ ಅಭಿಜ್ಞ,ಸಂಗ್ರಹಕಾರ ಮತ್ತು ಗ್ಯಾಲರಿ ಒಡೆಯರೂ ಆಗಿದ್ದ ಅಲ್ಕಾಝಿ ದಿಲ್ಲಿಯಲ್ಲಿ ಆರ್ಟ್ ಹೆರಿಟೇಜ್ ಗ್ಯಾಲರಿಯನ್ನು ಸ್ಥಾಪಿಸಿದ್ದರು.

ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ಸ್ ಆರ್ಟ್‌ನಲ್ಲಿ ರಂಗಶಿಕ್ಷಣ ಪಡೆದಿದ್ದ ಅವರು ತನ್ನ ವೃತ್ತಿಜೀವನದಲ್ಲಿ 50ಕ್ಕೂ ಅಧಿಕ ನಾಟಕಗಳನ್ನು ಪ್ರದರ್ಶಿಸಿದ್ದು, 1950ರಲ್ಲಿ ಬಿಬಿಸಿ ಬ್ರಾಡಕಾಸ್ಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ತುಘಲಕ್ (ಗಿರೀಶ್ ಕಾರ್ನಾಡ್), ಆಷಾಢ್ ಕಾ ಏಕ್ ದಿನ್ (ಮೋಹನ ರಾಕೇಶ್),ಅಂಧಾ ಯುಗ್ (ಧರ್ಮವೀರ ಭಾರ್ತಿ) ಇವು ಅಲ್ಕಾಝಿಯವರ ನಿರ್ದೇಶನದ ಪ್ರಮುಖ ನಾಟಕಗಳಲ್ಲಿ ಒಳಗೊಂಡಿದ್ದು,ಹಲವಾರು ಗ್ರೀಕ್ ದುರಂತ ಕಥೆಗಳು ಮತ್ತು ಶೇಕ್ಸ್‌ಪಿಯರ್ ಕೃತಿಗಳನ್ನೂ ಅವರು ರಂಗಕ್ಕೆ ತಂದಿದ್ದರು.

ಪದ್ಮವಿಭೂಷಣ(2010),ಪದ್ಮಭೂಷಣ(1991) ಮತ್ತು ಪದ್ಮಶ್ರೀ(1966) ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಅವರು ಶಿಸ್ತುಬದ್ಧ ವ್ಯಕ್ತಿಯಾಗಿದ್ದು 1962-1977ರ ಅವಧಿಯಲ್ಲಿ ಎನ್‌ಎಸ್‌ಡಿ ನಿರ್ದೇಶಕರಾಗಿ ರಂಗ ತರಬೇತಿಗೆ ನೀಲನಕ್ಷೆಯನ್ನು ಒದಗಿಸಿದ್ದರು.

ನಾಸಿರುದ್ದೀನ್ ಶಾ, ಓಂ ಪುರಿ, ಉತ್ತರಾ ಬಾವೊಕರ್ ಮತ್ತು ರೋಹಿಣಿ ಹಟ್ಟಂಗಡಿ ಸೇರಿದಂತೆ ದೇಶದ ಕೆಲವು ಅತ್ಯುತ್ತಮ ನಟನಾ ಪ್ರತಿಭೆಗಳನ್ನು ತರಬೇತುಗೊಳಿಸಿದ್ದ ಅಲ್ಕಾಝಿ,ದೇಶದ ಹಲವಾರು ಪ್ರಮುಖ ರಂಗ ನಿರ್ದೇಶಕರಿಗೂ ತರಬೇತಿಯನ್ನು ನೀಡಿದ್ದರು. ಅವರ ಪತ್ನಿ ರೋಷನ್ ಅಲ್ಕಾಜಿ ಪತಿಯ ನಾಟಕಗಳಿಗೆ ವೇಷಭೂಷಣಗಳ ವಿನ್ಯಾಸವನ್ನು ನಿರ್ವಹಿಸುತ್ತಿದ್ದರು.

ಅಲ್ಕಾಝಿ ಅವರ ಇಬ್ಬರು ಮಕ್ಕಳೂ ರಂಗಕರ್ಮಿಗಳಾಗಿದ್ದಾರೆ.

ಪುತ್ರಿ ಅಮಲ್ ಅಲ್ಲಾನಾ ಅವರು ರಂಗ ನಿರ್ದೇಶಕಿಯಾಗಿದ್ದು,ಎನ್‌ಎಸ್‌ಡಿಯ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ. ಪುತ್ರ ಫೈಸಲ್ ಅಲ್ಕಾಝಿ ಅವರೂ ರಂಗ ನಿರ್ದೇಶಕರಾಗಿದ್ದಾರೆ.

ಅಲ್ಕಾಝಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು,‘ನಾಟಕಗಳನ್ನು ಜನಪ್ರಿಯಗೊಳಿಸುವಲ್ಲಿ ಮತ್ತು ನಾಟಕ ಕಲೆಯನ್ನು ದೇಶಾದ್ಯಂತ ತಲುಪಿಸುವಲ್ಲಿ ತನ್ನ ಪ್ರಯತ್ನಗಳಿಗಾಗಿ ಅಲ್ಕಾಝಿ ಸದಾ ನೆನಪಿನಲ್ಲಿರುತ್ತಾರೆ ’ಎಂದು ಟ್ವೀಟಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X