ದಕ್ಷಿಣ ಕೊರಿಯದಲ್ಲಿ ಭಾರೀ ಮಳೆ; ಪ್ರವಾಹ
ನೂರಾರು ಮಂದಿ ಪಲಾಯನ; ಕನಿಷ್ಠ 13 ಸಾವು
ಸಿಯೋಲ್ (ದಕ್ಷಿಣ ಕೊರಿಯ), ಆ. 4: ದಕ್ಷಿಣ ಕೊರಿಯದಲ್ಲಿ ಏಳು ವರ್ಷಗಳಲ್ಲೇ ಅಧಿಕ ಮಳೆ ಸುರಿದಿದ್ದು, ಭಾರೀ ಪ್ರವಾಹ ತಲೆದೋರಿದೆ ಹಾಗೂ 1,000ಕ್ಕೂ ಅಧಿಕ ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ. ವಿವಿಧ ಸ್ಥಳಗಳಲ್ಲಿ ಸಂಭವಿಸಿದ ಭೂಕುಸಿತಗಳಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪ್ರವಾಹದ ನೀರು ಕೃಷಿ ಭೂಮಿಯನ್ನು ಆವರಿಸಿದೆ ಹಾಗೂ ರಾಜಧಾನಿ ಸಿಯೋಲ್‌ನಲ್ಲಿರುವ ಹಲವಾರು ಹೆದ್ದಾರಿಗಳು ಮತ್ತು ಸೇತುವೆಗಳ ಮೇಲೆ ಪ್ರವಾಹದ ನೀರು ಹರಿಯುತ್ತಿದೆ.
ದೇಶದಲ್ಲಿ ನಿರಂತರವಾಗಿ 42 ದಿನಗಳ ಕಾಲ ಮಳೆ ಸುರಿದಿದ್ದು, 2013ರ ಬಳಿಕ ಇಷ್ಟು ದೀರ್ಘಾವಧಿಯಲ್ಲಿ ಮಳೆ ಸುರಿದಿದ್ದು ಇದೇ ಮೊದಲ ಬಾರಿಯಾಗಿದೆ.
Next Story