ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಕೊರೋನ ಪಾಸಿಟಿವ್
ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾರಿಗೆ ಕೊರೋನ ಸೋಂಕು ತಗಲಿರುವುದು ದೃಢವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಅವರು ''ಸಣ್ಣ ಮಟ್ಟಿನ ಜ್ವರ ಇದ್ದ ಕಾರಣ ಮಾಡಿಸಿದ ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಎಂದು ವರದಿ ಬಂದಿದೆ.
ಸಣ್ಣ ಮಟ್ಟಿನ ಜ್ವರ ಹೊರತುಪಡಿಸಿ ಬೇರೆ ಯಾವುದೇ ಲಕ್ಷಣಗಳಿಲ್ಲದೆ ಇರುವುದರಿಂದ ಮನೆಯಲ್ಲಿಯೇ ಇದ್ದು ಶುಶ್ರೂಷೆ ಪಡೆಯುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ'' ಎಂದು ಅವರು ತಿಳಿಸಿದ್ದಾರೆ.
Next Story