ವೃದ್ಧ ನಾಪತ್ತೆ
ಉಡುಪಿ, ಆ.6: ಶ್ರೀನಿವಾಸ ನಾಯ್ಕ (72 ವರ್ಷ) ಎಂಬವರು ಜು.3 ರಿಂದ ಕಾಣೆಯಾಗಿದ್ದಾರೆ. 168 ಸೆ.ಮಿ. ಎತ್ತರವಿದ್ದು ಕೋಲು ಮುಖ, ಸಪೂರ ಶರೀರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದಾರೆ.
ಕನ್ನಡ, ತುಳು, ಮರಾಠಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಿಳಿ ಅಂಗಿ, ಬಿಳಿ ಪಂಚೆ ಧರಿಸಿರುತ್ತಾರೆ. ಇವರ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ. ಸಂ.: 0820-2551033, 9480805449ಕ್ಕೆ ಮಾಹಿತಿ ನೀಡುವಂತೆ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story