Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೋರ್ಟ್ ನಿಂದನೆ ಅಸ್ತ್ರ ಸಮಸ್ಯೆಗೆ...

ಕೋರ್ಟ್ ನಿಂದನೆ ಅಸ್ತ್ರ ಸಮಸ್ಯೆಗೆ ಪರಿಹಾರ ಮಾರ್ಗ ಅಲ್ಲ

ಎಚ್. ಎಸ್. ದೊರೆಸ್ವಾಮಿಎಚ್. ಎಸ್. ದೊರೆಸ್ವಾಮಿ7 Aug 2020 12:10 AM IST
share
ಕೋರ್ಟ್ ನಿಂದನೆ ಅಸ್ತ್ರ ಸಮಸ್ಯೆಗೆ ಪರಿಹಾರ ಮಾರ್ಗ ಅಲ್ಲ

ಭಾಗ-2

ನ್ಯಾಯಾಧೀಶರು ಆಗಾಗ ಹೇಳುತ್ತಿರುತ್ತಾರೆ-ನಮ್ಮ ತೀರ್ಪುಗಳು ಕಾನೂನು ಮತ್ತು ನಾಲ್ಕು ಗೋಡೆಗಳ ಮಧ್ಯೆ ವಕೀಲರ ಆರ್ಗ್ಯುಮೆಂಟ್ ಆಧಾರದ ಮೇಲೆ ಹೊರಬೀಳುತ್ತವೆ ಎಂದು. ನಮ್ಮ ಅನುಭವದಲ್ಲಿ ತೀರ್ಪುಗಳು ನ್ಯಾಯಾಧೀಶರ ಐಡಿಯಾಲಜಿಗೆ ಅನುಗುಣವಾಗಿ ಹೊರಬೀಳುತ್ತವೆ. ಅವರ ಐಡಿಯಾಲಜಿ ಅಂದರೆ ಅವರು ಯಾವ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ, ಅವರಲ್ಲಿ ಯಾವ ರೀತಿಯ ಪೂರ್ವಗ್ರಹಗಳು ಮನೆ ಮಾಡಿವೆಯೋ, ಇವೆಲ್ಲದರ ಮೇಲೆ ಆ ನ್ಯಾಯಾಧೀಶರ ತೀರ್ಪು ಹೊರಬೀಳುತ್ತದೆ. ಪರಿಸ್ಥಿತಿ ಹೀಗಿದ್ದೂ ಆ ನ್ಯಾಯಾಧೀಶರ ತೀರ್ಪನ್ನು ಕೋರ್ಟ್ ನಿಂದನೆ ಎಂದು ಪರಿಗಣಿಸುವುದಿಲ್ಲವೇಕೆ? ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸುವುದಿಲ್ಲ ಏಕೆ?

1965ರಲ್ಲಿ ಉತ್ತರ ಪ್ರದೇಶದ ಎಂಎಲ್‌ಎ ಒಬ್ಬರ ಮೇಲೆ ಕೋರ್ಟ್ ನಿಂದನೆ ಕೇಸನ್ನು ಹಾಕಲಾಗಿತ್ತು. ತೀರ್ಪು ಹೊರಬಿದ್ದ ಸಂದರ್ಭದಲ್ಲಿ ಶ್ರೇಷ್ಠ ಸಾಂವಿಧಾನಿಕ ಕಾನೂನು ತಜ್ಞರಾದ ಎಚ್.ಎಂ. ಸೀರ್‌ವಾಯ್ ಅವರು ತೀರ್ಪು ನೀಡಿದ 7 ನ್ಯಾಯಾಧೀಶರ ಪೈಕಿ 6 ನ್ಯಾಯಾಧೀಶರ ವಿರುದ್ಧ ತೀಕ್ಷ್ಣವಾಗಿ ತಮ್ಮ ಅಭಿಪ್ರಾಯವನ್ನು ಹೊರಗೆಡಹಿದರು. ಗಜೇಂದ್ರ ಗಡ್‌ಕರ್ (ಸಿಜೆ), ಸುಬ್ಬರಾವ್, ವಾಂಛೂ, ಹಿದಾಯತುಲ್ಲಾ, ಜೆ.ಸಿ. ಶಾ, ರಾಜಗೋಪಾಲ ಅಯ್ಯಂಗಾರ್ ಎಂಬ ಆ ಆರು ಮಂದಿ ನ್ಯಾಯಾಧೀಶರನ್ನು ಕುರಿತು, ‘‘ಕುರುಡು ಕಣ್ಣುಗಳಿಂದ ನಿಮ್ಮ ಮನಸ್ಸನ್ನು ಮುಚ್ಚಿ ಹಾಕಿ, ಈ ಖಟ್ಲೆಯಲ್ಲಿ ವಿಶೇಷ ಆಸಕ್ತಿ ವಹಿಸಿ, ಮೊದಲೇ ತೀರ್ಮಾನಕ್ಕೆ ಬಂದ ಮನಸ್ಥಿತಿಯಲ್ಲಿ ಈ ಖಟ್ಲೆಯನ್ನು ನಡೆಸಿದ್ದೀರಿ’’ ಎಂದು ಸೀರ್‌ವಾಯ್ ಆಪಾದನೆ ಮಾಡಿದರು. ಇದಕ್ಕೆ ಯಾರೊಬ್ಬರೂ ಪ್ರತಿಕ್ರಿಯಿಸುವ ಧೈರ್ಯ ಮಾಡಲಿಲ್ಲ. ಕಾರಣವೇನೆಂದರೆ ನ್ಯಾಯಾಧೀಶರು ಸಂವಿಧಾನದ ವಿಶ್ಲೇಷಣೆ ವಿಚಾರದಲ್ಲಿ ಸೀರ್‌ವಾಯ್ ಅವರನ್ನು ಅವಲಂಬಿಸಿದ್ದರು. 1987ರಲ್ಲಿ ಮಾಜಿ ಕಾನೂನು ಮಂತ್ರಿ ಪಿ. ಶಿವಶಂಕರ್ ಅವರು, ‘‘ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಾಮಾನ್ಯವಾಗಿ ಪ್ರತಿಷ್ಠಿತ ವರ್ಗದವರಿರುತ್ತಾರೆ, ಈ ಕೋರ್ಟು FERA ಕಾಯ್ದೆ ಉಲ್ಲಂಘಿಸುವವರಿಗೆ, ಹೆಂಡಂದಿರನ್ನು ಸುಟ್ಟು ಹಾಕುವವರಿಗೆ ಮತ್ತು ಪ್ರತಿಗಾಮಿಗಳಿಗೆ ಒಂದು ಸುರಕ್ಷಿತ ತಾಣವಾಗಿದೆ’’ ಎಂದು ಹೇಳಿದ್ದರು. ಆಗ ಸರ್ವೋಚ್ಚ ನ್ಯಾಯಾಲಯ ‘‘ಇಂತಹ ಕಠಿಣ ಶಬ್ದಗಳನ್ನು ಸಚಿವರು ಬಳಸದಿದ್ದರೆ ಚೆನ್ನಾಗಿತ್ತು’’ ಎಂದಷ್ಟೇ ಅಭಿಪ್ರಾಯಪಟ್ಟಿತು. ಖ್ಯಾತ ಮಾರ್ಕ್ಸ್‌ವಾದಿಗಳಾದ ಇ.ಎಂ.ಎಸ್. ನಂಬೂದರಿಪಾಡ್‌ರು ನ್ಯಾಯಾಂಗವನ್ನು ದಬ್ಬಾಳಿಕೆಯ ಸಾಧನ ಎಂದು ಪರಿಭಾವಿಸಿದ್ದರು.

ಮೈಲಾರ್ಡ್ಸ್, ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡಿರುವ ದೇಶ ನಮ್ಮದು ಎಂದು ನಾವು ಘೋಷಿಸಿಕೊಂಡಿದ್ದೇವೆ. ಅದು ಢೋಂಗಿಯೇ? ಎಂಬುದು ಒಂದು ಚರ್ಚಾಸ್ಪದ ವಿಷಯ. ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸಂವಿಧಾನವನ್ನು ನಮಗಾಗಿ ರಚಿಸಿಕೊಂಡಿದ್ದೇವೆ. ಈ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು, ಜಾರಿಗೆ ತರಲು ಒಂದು ಸರ್ವೋಚ್ಚ ನ್ಯಾಯಾಲಯ ಸ್ಥಾಪಿಸಿಕೊಂಡಿದ್ದೇವೆ. ಬಹುಸಂಖ್ಯೆಯಲ್ಲಿರುವ ಜನ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ದಬ್ಬಾಳಿಕೆ ನಡೆಸದಿರಲು ಈ ನ್ಯಾಯಾಲಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈ ಬಗೆಯ ದಬ್ಬಾಳಿಕೆ ರಾಜಕೀಯವಾಗಿ ನಡೆಯಬಹುದು, ಸಾಮಾಜಿಕವಾಗಿ, ಆರ್ಥಿಕವಾಗಿ, ಜನಾಂಗೀಯವಾಗಿ ಕೂಡ ನಡೆಯಬಹುದು. ತುರ್ತು ಪರಿಸ್ಥಿತಿ ಹೇರಿದಾಗ ರಾಜಕೀಯ ವಿರೋಧಿಗಳನ್ನು ಅನಿರ್ದಿಷ್ಟ ಕಾಲ ಸೆರೆಮನೆಗೆ ಅಟ್ಟಿದ್ದನ್ನು ಕಂಡಿದ್ದೇವೆ; ನಕ್ಸಲೈಟರಿಗೆ ಸಹಾನುಭೂತಿ ತೋರುವವರು, ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಎಲ್ಲರನ್ನೂ ಬಂಧಿಸಲಾಗಿತ್ತು.

ಇಂದು ನಾವು ಕಾಣುತ್ತಿರುವುದು - ಸೆರೆಮನೆಯಲ್ಲಿರಲು ಕಾರಣವೇ ಇಲ್ಲದ ಬುದ್ಧಿವಂತ ಕ್ರಿಯಾಶೀಲ ವ್ಯಕ್ತಿಗಳು ದೀರ್ಘಕಾಲ ಸೆರೆಯಲ್ಲಿರುವುದು, ಅವರಿಗೆ ಜಾಮೀನು ಸಿಗದಿರುವುದು. ಇವರ ಪೈಕಿ 60 ವರ್ಷಕ್ಕೂ ಹೆಚ್ಚು ಪ್ರಾಯದ ಸುಧಾ ಭಾರದ್ವಾಜ್ ಅವರು ತೀವ್ರ ರೀತಿಯ ರಕ್ತಹೀನತೆಯ ಕಾಯಿಲೆಯಿಂದ ನರಳುತ್ತಿದ್ದರೂ ಅವರಿಗೆ ಬಿಡುಗಡೆ ಇಲ್ಲ. ಇದು ಸ್ಪಷ್ಟವಾಗಿ ಮೂಲಭೂತ ಹಕ್ಕುಗಳ ಉಲ್ಲಂಘನೆ. ಇಸ್ಲಾಂ ಧರ್ಮಪ್ರಚಾರಕರೊಬ್ಬರನ್ನು ಜಾಮೀನು ಕೊಡದೆ 9 ವರ್ಷಗಳಿಂದ ಸೆರೆಮನೆಯಲ್ಲಿ ಕೊಳೆ ಹಾಕಲಾಗಿತ್ತು. ಆನಂತರ ಅವರು ಅಪರಾಧ ಮುಕ್ತರು ಎಂದು ತೀರ್ಪಾಗಿ ಬಂಧನದಿಂದ ಮುಕ್ತರಾಗಿದ್ದಾರೆ. ಸಂವಿಧಾನದಲ್ಲಿ ನಂಬಿಕೆ ಇಲ್ಲದಿದ್ದರೂ ಅಂಥವರಿಗೂ ಸಂವಿಧಾನ ಮೂಲಭೂತ ಹಕ್ಕುಗಳನ್ನು ದಯಪಾಲಿಸಿದೆ ಎಂಬುದನ್ನು ಮರೆಯಬಾರದು.
ತುರ್ತು ಪರಿಸ್ಥಿತಿ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಗೆ ನಡೆದುಕೊಂಡಿತು ಎಂಬುದನ್ನು ನೆನಪಿಸಿಕೊಳ್ಳುವುದು ಸಮಯ ಹಾಳು. ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದು ಅನತಿಕಾಲದಲ್ಲೇ ಬಹಿರಂಗಗೊಳ್ಳುತ್ತದೆ.

ನ್ಯಾಯಾಂಗವನ್ನು ದೂಷಣೆ ಮಾಡುವುದಕ್ಕೆ ಅಥವಾ ವ್ಯಕ್ತಿಗತವಾಗಿ ದೂಷಣೆ ಮಾಡುವುದಕ್ಕೆ ವೈಯಕ್ತಿಕವಾಗಿ ನಮಗ್ಯಾರಿಗೂ ಯಾವ ಆಸಕ್ತಿಯೂ ಇಲ್ಲ. ಹಿಂದಿನ 4 ಹಿರಿಯ ನ್ಯಾಯಾಧೀಶರು ಟೀಕೆ ಮಾಡಿದಂತೆ, ನಾವೂ ಮಾತನಾಡುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಮಾತನಾಡಿದ್ದೇವೆ. ಈ ಸಂದರ್ಭದಲ್ಲಿ ವೈಯಕ್ತಿಕವಾಗಿಯೂ ನಾವು ಟೀಕೆ ಮಾಡಿರಬಹುದು. ಈ ನಮ್ಮ ಕರ್ತವ್ಯವನ್ನು ಒಂದು ಮಹೋದ್ದೇಶ ಇಟ್ಟುಕೊಂಡೇ ನಿರ್ವಹಿಸಿದ್ದೇವೆ. ಅದಕ್ಕೆ ಕಾರಣವೆಂದರೆ ನ್ಯಾಯಾಂಗದ ತೀರ್ಪುಗಳಲ್ಲಿ, ಅದರಲ್ಲೂ ಮುಖ್ಯವಾಗಿ ಅವಕಾಶ ವಂಚಿತರು ಮತ್ತು ಸರಕಾರವನ್ನು ವಿರೋಧ ಮಾಡುವವರ ಪ್ರಕರಣಗಳಲ್ಲಿ ಪ್ರಕಟವಾಗುವ ನ್ಯಾಯಾಂಗ ತೀರ್ಪುಗಳಲ್ಲಿ ಮೇಲಿಂದ ಮೇಲೆ ಅಸಮಂಜಸತೆ (inconsistency) ಕಾಣಿಸಿಕೊಳ್ಳುತ್ತಿರುವುದರಿಂದ. ಇದಕ್ಕೆ ಪರಿಹಾರ ನ್ಯಾಯಾಂಗ ನಿಂದನೆ ಗುಮ್ಮವನ್ನು ಛೂ ಬಿಡುವುದಲ್ಲ, ಬದಲಿಗೆ, ನ್ಯಾಯದ ವಿಚಾರದಲ್ಲಿ ಗೌರವ ಮೂಡುವಂತೆ ಮಾಡುವುದು.
ದಯವಿಟ್ಟು ಗಮನಿಸಿ - ನಾವು ಬ್ರಿಟಿಷರಿಂದ ನ್ಯಾಯಶಾಸ್ತ್ರವನ್ನು (jurisprudence ಅನ್ನು) ಎರವಲು ಪಡೆದಿದ್ದೇವೆ. ಆದರೆ ಅದೇ ಇಂಗ್ಲೆಂಡ್ ದೇಶವು ನ್ಯಾಯಾಲಯ ನಿಂದನೆ ಕಾಯ್ದೆ ವಾಕ್ ಸ್ವಾತಂತ್ರ್ಯಕ್ಕೆ ಅಡ್ಡ ಬರುವುದೆಂಬುದನ್ನು ಅರಿತು ಅದನ್ನು ಕಾನೂನಿನ ಕಡತದಿಂದ ತೆಗೆದುಹಾಕಿದೆ.

(ಇದು 28-7-2020ರ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಅದರ ಸಂಪಾದಕರಾದ ಜಿ.ಎಸ್.ವಾಸು ಅವರು ಬರೆದಿರುವ ಸಂಪಾದಕೀಯ ಲೇಖನ. ಅದರ ಸಾರಾಂಶವನ್ನು ನನ್ನ ಗ್ರಹಿಕೆಗನುಸಾರ ಕನ್ನಡದಲ್ಲಿ ಬರೆದಿದ್ದೇನೆ. ಕನ್ನಡಿಗರಿಗೆ ಈ ಮಹತ್ವದ ಲೇಖನವನ್ನು ಪರಿಚಯಿಸುವುದು ಅತ್ಯಗತ್ಯ ಎಂದು ಭಾವಿಸಿದ್ದೇನೆ.)

share
ಎಚ್. ಎಸ್. ದೊರೆಸ್ವಾಮಿ
ಎಚ್. ಎಸ್. ದೊರೆಸ್ವಾಮಿ
Next Story
X