ಆ.8, 9: ಸಮಸ್ತ ಆನ್ಲೈನ್ ಮದ್ರಸ ರಜೆ
ಚೇಳಾರಿ, ಆ.6: ಕರ್ನಾಟಕ ಮತ್ತು ಕೇರಳದ ವಿವಿಧ ಭಾಗಗಳಲ್ಲಿ ಬಲವಾದ ಗಾಳಿ, ಮಳೆ ಮತ್ತು ಪ್ರವಾಹದ ಕಾರಣ ವಿದ್ಯುತ್ ಕಡಿತ ಮತ್ತು ಇಂಟರ್ನೆಟ್ ಸೌಲಭ್ಯಗಳ ಕೊರತೆಯುಂಟಾಗಿ ವಿದ್ಯಾರ್ಥಿಗಳು ಆನ್ಲೈನ್ ಮದ್ರಸ ತರಗತಿಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆ.8,9 (ಶನಿ, ರವಿವಾರ)ರಂದು ಸಮಸ್ತ ಆನ್ಲೈನ್ ಮದ್ರಸ ತರಗತಿಗಳಿಗೆ ರಜೆಯಾಗಿರುತ್ತದೆ ಎಂದು ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಕಚೇರಿ ಪ್ರಕಟನೆ ತಿಳಿಸಿದೆ.
Next Story