ಸುಳ್ಯ : ಮೂವರು ಪತ್ರಕರ್ತರಿಗೆ ಕೊರೋನ ಪಾಸಿಟಿವ್
ಸುಳ್ಯದ ಪತ್ರಿಕೆಯೊಂದರ ಮೂವರು ಪತ್ರಕರ್ತರಿಗೆ ಕೊರೋನ ಪಾಸಿಟಿವ್ ಬಂದಿದೆ.
ಒಬ್ಬರಿಗೆ ನಿನ್ನೆ ಪಾಸಿಟಿವ್ ಬಂದಿತ್ತು. ಆ ಹಿನ್ನಲೆಯಲ್ಲಿ ಪ್ರಾಥಮಿಕ ಸಂಪರ್ಕಿತರಾದ ಅವರ ಕಚೇರಿಯ ಇತರ ಪತ್ರಕರ್ತರು ತಪಾಸಣೆಗೆ ಒಳಗಾದಾಗ ಇನ್ನಿಬ್ಬರಿಗೆ ಕೊರೋನ ಸೋಂಕು ಇರುವುದು ಕಂಡು ಬಂತು. ನಿನ್ನೆ ಸೋಂಕು ಕಂಡು ಬಂದ ಪತ್ರಕರ್ತರು ಅವರ ಮನೆಯಲ್ಲೇ ಕ್ವಾರೆಂಟೈನ್ನಲ್ಲಿದ್ದು, ಇಂದು ಪಾಸಿಟಿವ್ ಬಂದ ಇಬ್ಬರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
Next Story