ವಂ. ಮೌರೀಸ್ ಎಫ್ ಡಿಸೋಜ ನಿಧನ
ಮಂಗಳೂರು, ಆ. 8: ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಹಿರಿಯ ಧರ್ಮಗುರುಗಳಲ್ಲಿ ಒಬ್ಬರಾದ ವಂ.ಮೌರೀಸ್. ಎಫ್.ಡಿಸೋಜ (90) ಅವರು ಇಂದು ಬೆಳಗ್ಗೆ 11:55 ಕ್ಕೆ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ದಿವಂಗತ ಸಂತಾನ್ ಡಿಸೋಜಾ ಮತ್ತು ದಿ.ಕೊಸೆಸ್ ಸೆರ್ರಾ ಅವರ ಪುತ್ರ.
ಅವರು ಮಾರ್ಚ್ 1, 1958 ರಂದು ಮಂಗಳೂರು ಡಯಾಸಿಸ್ನ ಧರ್ಮಗುರುಗಳಾಗಿ ದೀಕ್ಷೆ ಪಡೆದು,ಕಾರ್ಕಳ ಪಟ್ಟಣ, ವೇಲೆನ್ಸಿಯಾ ಕಲ್ಯಾಣಪುರ, ಮಿಲಾಗ್ರೆಸ್ ಮಂಗಳೂರು ಮತ್ತು ವಾಮಂಜೂರಿನಲ್ಲಿ ಸಹಾಯಕ ಪ್ಯಾರಿಷ್ ಪ್ರೀಸ್ಟ್ ಆಗಿ ಸೇವೆ ಸಲ್ಲಿಸಿದರು. ಅವರು ನೀರ್ಮಾರ್ಗ, ಅಗ್ರಾರ್, ಉಲ್ಲಾಳ್ , ಪನೀರ್, ಪೆಜೀರ್ ಮತ್ತು ಕೂಳೂರು ಪ್ಯಾರಿಷ್ಗಳಲ್ಲಿ ಪ್ಯಾರಿಷ್ ಪ್ರೀಸ್ಟ್ ಆಗಿ ಸೇವೆ ಸಲ್ಲಿಸಿದರು. 2005 ರಲ್ಲಿ ನಿವೃತ್ತಿಯಾದ ನಂತರ, ಅವರು ವಿಯಾನಿ ಮನೆಯಲ್ಲಿಯೇ ಇದ್ದರು ಮತ್ತು 2005 ರಿಂದ 2007 ರಲ್ಲಿ ಅದರ ಪಾಲಕರಿಗೆ ಸೇವೆ ಸಲ್ಲಿಸಿ ದರು. ಆಗಸ್ಟ್ 9 ರವಿವಾರ ವೇಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್ನಲ್ಲಿ ಸಂಜೆ 4 ಗಂಟೆಗೆ ಅಂತಿಮ ದರ್ಶನದ ಬಳಿಕ ವೇಲೆನ್ಸಿಯಾದ ಮಂಗಳೂರು ಡಯೋಸಿಸ್ ಪ್ರೀಸ್ಟ್ ಸ್ಮಶಾನದಲ್ಲಿ ಸಮಾಧಿ ನಡೆಯಲಿದೆ.