ಜುಲೈನಲ್ಲಿ ಮರಣ ಪ್ರಮಾಣ ಅಧಿಕ: 2019ರ ಜುಲೈನಲ್ಲಿ 5,278 ಮರಣ, 2020ರಲ್ಲಿ 6,477ಕ್ಕೆ ಏರಿಕೆ
ಬೆಂಗಳೂರು, ಆ.9: ಜುಲೈನಲ್ಲಿ ಮರಣದ ನೋಂದಣಿ ಪ್ರಮಾಣ ಅಧಿಕ ಸಂಖ್ಯೆಯಲ್ಲಿ ಆಗಿದೆ ಎಂದು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಲಾಕ್ಡೌನ್, ಜನತಾ ಕರ್ಫ್ಯೂ ಇದ್ದಿದ್ದರಿಂದ ಹಾಗೂ ಸಾರಿಗೆ ಸೌಲಭ್ಯ ಇಲ್ಲದೇ ಎಪ್ರಿಲ್, ಮೇ ತಿಂಗಳುಗಳಲ್ಲಿ ಮೃತಪಟ್ಟವರ ನೋಂದಣಿ ನಡೆದಿರಲಿಲ್ಲ. ಜುಲೈನಲ್ಲಿ ನೋಂದಣಿ ನಡೆದಿರುವುದರಿಂದ ಸಂಖ್ಯಾತ್ಮಕವಾಗಿ ಹೆಚ್ಚಳ ಕಂಡಿದೆ ಎಂದರು.
2019ರ ಜನವರಿ–ಜುಲೈ ಅವಧಿಯಲ್ಲಿ ಬೆಂಗಳೂರಿನಲ್ಲಿ 37,004 ಮರಣ ಸಂಭವಿಸಿದ್ದರೆ, 2020ರ ಇದೇ ಅವಧಿಯಲ್ಲಿ 35,307 ಮರಣ ಪ್ರಕರಣಗಳು ನೋಂದಣಿಯಾಗಿವೆ. ಸಂಖ್ಯೆಯಲ್ಲಿ 1,697ರಷ್ಟು ಕಡಿಮೆಯಾಗಿದೆ. 2019ರ ಜುಲೈನಲ್ಲಿ 5,278 ಮರಣ ಪ್ರಕರಣಗಳು ವರದಿಯಾಗಿದ್ದರೆ, 2020ರಲ್ಲಿ 6,477ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
Next Story