ಅಂಬ್ಲಮೊಗರು: ಅಲ್ ರೈಹಾನ್ ಫೌಂಡೇಶನ್ ಯುಎಇ ಸಮಿತಿ ರಚನೆ
ಕಮಾಲುದ್ದೀನ್
ಮಂಗಳೂರು, ಆ.10: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ನಿರ್ಗತಿಕರ ಸಹಾಯ ಹಾಗು ವಿದೇಶದಲ್ಲಿ ದುಡಿಯುತ್ತಿರುವ ಪ್ರವಾಸಿಗಳ ಕ್ಷೇಮ ಉನ್ನತಿಗಾಗಿ ಅಲ್-ರೈಹಾನ್ ಅಂಬ್ಲಮೊಗರು ಯುಎಇ ನೂತನ ಸಮಿತಿಯು ಕಮಾಲುದ್ದೀನ್ ಅಂಬ್ಲಮೊಗರು ಅವರ ಅಧ್ಯಕ್ಷತೆಯಲ್ಲಿ ಇತೀಚೆಗೆ ಆನ್ಲೈನ್ ಮೂಲಕ ನಡೆಯಿತು.
ಅಲ್-ರೈಹಾನ್ನ ನೂತನ ರಚನಾ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಫೈಝಲ್ ಪರೇಕಳ ಕುಂಡೂರ್, ನೂತನ ಅಧ್ಯಕ್ಷರಾಗಿ ಕಮಾಲುದ್ದೀನ್ ಅಂಬ್ಲಮೊಗರು,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಕೀಮ್ ದೋಟ, ಕೋಶಾಧಿಕಾರಿಯಾಗಿ ಮುಹಮ್ಮದ್ ಶಿಹಾಬ್ ಹಾಗು ಇಮ್ತಿಯಾಝ್, ಉಪಾಧ್ಯಕ್ಷರಾಗಿ ಅಝೀಝ್ ಮದಕ ಹಾಗು ಅಬ್ದುಲ್ ಸಲಾಂ ಮದಕ, ಜೊತೆ ಕಾರ್ಯದರ್ಶಿಯಾಗಿ ಇರ್ಫಾಝ್ ದೋಟ ಹಾಗು ಅಝೀಝ್ ಎಸ್ಎಂ ಹಾಗು ಸಲಹಾ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್ ಕುಂಡೂರ್, ಅಬೂಬಕ್ಕರ್ ಎಸ್.ಬಿ., ರಝಾಕ್ ಮದಕ, ಲತೀಫ್ ಬಂದರ್ಪಡೆ, ಲತೀಫ್ ಎಸ್.ಎಂ. ಮತ್ತು ಹಂಝ ಮದಕ ಹಾಗೂ 10 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರಿಸಲಾಯಿತು.
Next Story