ಬೈಂದೂರು ತಾಪಂ ಅಧ್ಯಕ್ಷರಾಗಿ ಮಹೇಂದ್ರ ಪೂಜಾರಿ ಆಯ್ಕೆ
ಬೈಂದೂರು, ಆ.11: ನೂತನ ಬೈಂದೂರು ತಾಲೂಕು ಪಂಚಾಯತ್ ಇದರ ಪ್ರಥಮ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಮಹೇಂದ್ರ ಪೂಜಾರಿ ನಾವುಂದ ಹಾಗೂ ಉಪಾಧ್ಯಕ್ಷರಾಗಿ ಮಾಲಿನಿ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಯಡ್ತರೆ ಗ್ರಾಪಂ ಸಭಾಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ಯಲ್ಲಿ ಈ ಆಯ್ಕೆ ಮಾಡಲಾಯಿತು. ಕುಂದಾಪುರ ಸಹಾಯಕ ಆಯುಕ್ತ ರಾಜು ಈ ಆಯ್ಕೆ ಪ್ರಕ್ರಿಯೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ಕುಂದಾಪುರದಿಂದ ಇಬ್ಭಾಗವಾಗಿ ನೂತನವಾಗಿ ರಚನೆಯಾದ ಬೈಂದೂರು ತಾಪಂನಲ್ಲಿ ಒಟ್ಟು 14 ಮಂದಿ ಸದಸ್ಯರಿದ್ದಾರೆ. ಈ ಸಂದರ್ಭದಲ್ಲಿ ಬೈಂದೂರು ತಾಪಂ ಕಾರ್ಯನಿವಹರ್ಣಾಧಿಕಾರಿ ಭಾರತಿ ಉಪಸ್ಥಿತರಿದ್ದರು.
Next Story