ಎಸೆಸೆಲ್ಸಿ ಸಾಧಕರಿಗೆ ಕ್ಯಾಂಪಸ್ ಫ್ರಂಟ್ ಸನ್ಮಾನ
ಜೋಕಟ್ಟೆ(ಮಂಗಳೂರು): 2019-20 ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫ್ರಂಟ್ ಜೋಕಟ್ಟೆ ಯುನಿಟ್ ವತಿಯಿಂದ ಸನ್ಮಾನಿಸಲಾಯಿತು.
ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಫರಾನ್ 570(91%)ಹಾಗೂ ಅಂಜುಮಾನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯಾದ ಫಾತಿಮ ಸುರಯ್ಯ 565(91.84%) ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ , ಜೋಕಟ್ಟೆ ಏರಿಯಾ ಅದ್ಯಕ್ಷ ಝಿಯಾದ್, ಜೋಕಟ್ಟೆ ಪಂಚಾಯತ್ ಮಾಜಿ ಸದಸ್ಯ ಪರ್ವೀಝ್ ಅಲಿ ಜೋಕಟ್ಟೆ ಉಪಸ್ಥಿತರಿದ್ದರು. ನೌಫಲ್ ಜೋಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.
Next Story