ತೈವಾನ್ ಜೊತೆಗೆ ಅಮೆರಿಕದ ಸಂಬಂಧಕ್ಕೆ ವಿರೋಧ: ಚೀನಾ

ಬೀಜಿಂಗ್, ಆ. 12: ಯಾವುದೇ ರೂಪದಲ್ಲಿ ತೈವಾನ್ ಜೊತೆಗೆ ಅಮೆರಿಕ ಅಧಿಕೃತ ಸಂಬಂಧ ಹೊಂದುವುದನ್ನು ತಾನು ವಿರೋಧಿಸುವುದಾಗಿ ಚೀನಾ ಬುಧವಾರ ಹೇಳಿದೆ. ಅಮೆರಿಕದ ಆರೋಗ್ಯ ಕಾರ್ಯದರ್ಶಿ ಅಲೆಕ್ಸ್ ಅಝರ್ ತೈವಾನ್‌ಗೆ ಭೇಟಿ ನೀಡಿದ ಬಳಿಕ ಚೀನಾ ಈ ಹೇಳಿಕೆ ನೀಡಿದೆ.
‘‘ಬೆಂಕಿಯೊಂದಿಗೆ ಆಡುವವರು ಸುಟ್ಟು ಹೋಗುತ್ತಾರೆ’’ ಎಂದು ಇಲ್ಲಿ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಹೇಳಿದರು.
Next Story