Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು ಕೇಂದ್ರ ಮಾರುಕಟ್ಟೆ ಪುನಾರಂಭ

ಮಂಗಳೂರು ಕೇಂದ್ರ ಮಾರುಕಟ್ಟೆ ಪುನಾರಂಭ

ಮನಪಾದಿಂದ ತೆರವು ಆದೇಶ ವಾಪಸ್ ಹಿನ್ನೆಲೆ

ವಾರ್ತಾಭಾರತಿವಾರ್ತಾಭಾರತಿ13 Aug 2020 10:01 AM IST
share
ಮಂಗಳೂರು ಕೇಂದ್ರ ಮಾರುಕಟ್ಟೆ ಪುನಾರಂಭ

ಮಂಗಳೂರು, ಆ.13: ಕೊರೋನ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್‌ಡೌನ್ ಸಂದರ್ಭವನ್ನು ಬಳಸಿಕೊಂಡ ಮಂಗಳೂರು ಮಹಾನಗರ ಪಾಲಿಕೆಯು ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಹೇರಿದ್ದ ನಿಷೇಧದ ಆದೇಶವನ್ನು ಸ್ವತಃ ಹೈಕೋರ್ಟ್‌ನಲ್ಲಿ ಹಿಂಪಡೆದ ಕಾರಣ ಗುರುವಾರದಿಂದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ವಹಿವಾಟು ಆರಂಭಗೊಂಡಿವೆ.

ಕೊರೋನ ಸೋಂಕು ರೋಗ ಹರಡದಂತೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಆದರೆ, ಜನನಿಬಿಡ ಕೇಂದ್ರವಾದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಸುರಕ್ಷಿತ ಅಂತರ ಕಾಪಾಡಲು ಅಸಾಧ್ಯ ಮತ್ತು ಮಾರ್ಕೆಟ್ ಕಟ್ಟಡವು ಹಳೆಯದಾಗಿದ್ದರಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಕಟ್ಟಡ ಕಟ್ಟಿಸಲಾಗುವುದು ಎಂದು ಹೇಳಿಕೊಂಡ ಮನಪಾ ಆಡಳಿತವು ಎ.7ರಂದು ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ- ವ್ಯವಹಾರವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಅಲ್ಲದೆ ಬೈಕಂಪಾಡಿಯ ಎಪಿಎಂಸಿಗೆ ವ್ಯಾಪಾರ ಸ್ಥಳಾಂತರಿಸಿತ್ತು. ಚಿಲ್ಲರೆ ವ್ಯಾಪಾರಿಗಳಿಗೆ ನಗರದ ಪುರಭವನ, ಲೇಡಿಗೋಶನ್ ಆಸುಪಾಸಿನ ರಸ್ತೆ ಬದಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿತ್ತು. ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ನಿಷೇಧಿಸಿ ಮನಪಾ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕೆಲವು ವ್ಯಾಪಾರಿಗಳು ಮತ್ತು ವ್ಯಾಪಾರಸ್ಥರ ಸಂಘಟನೆಯು ನ್ಯಾಯಾಲಯದ ಮೊರೆ ಹೋಗಿ ದ್ದರು. ಹೈಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದಂತೆಯೇ ಆ.12ರಂದು ಮಹಾನಗರ ಪಾಲಿಕೆಯು ಎ.7ರ ಆದೇಶವನ್ನು ರದ್ದುಪಡಿಸು ವುದಾಗಿ ಲಿಖಿತ ಹೇಳಿಕೆ ನೀಡಿ ಅಚ್ಚರಿ ಮೂಡಿಸಿತ್ತು. ಸ್ವತಃ ಮನಪಾವೇ ತನ್ನ ಆದೇಶವನ್ನು ಹಿಂದಕ್ಕೆ ಪಡೆದ ಕಾರಣ ವ್ಯಾಪಾರಿಗಳು ತಕ್ಷಣದಿಂದಲೇ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಸಿದ್ಧತೆ ನಡೆಸಿದ್ದರು.

ಅಂದರೆ ಆ.12 ರಂದು ಸಂಜೆ ವೇಳೆಗೆ ಕೆಲವು ವ್ಯಾಪಾರಿಗಳು ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಹೊರಗಿನ ಅಂಗಡಿಗಳನ್ನು ತೆರೆದಿದ್ದರೆ, ಗುರುವಾರ ಬೆಳಗ್ಗೆ ಮತ್ತೆ ವ್ಯಾಪಾರಿಗಳು ಮಾರ್ಕೆಟ್ ಆವರಣಕ್ಕೆ ತೆರಳಿ ಅಂಗಡಿಗಳನ್ನು ತೆರೆಯಲು ಯತ್ನಿಸಿದರು. ಈ ಸಂದರ್ಭ ಮಹಾನಗರ ಪಾಲಿಕೆ ಅಧಿಕಾರಿಗಳು ತಡೆಯಲು ಯತ್ನಿಸಿದರು. ಆಗ ವ್ಯಾಪಾರಿಗಳು ತಮ್ಮ ವಕೀಲರ ಮೂಲಕ ಹೈಕೋರ್ಟಿನ ಆದೇಶವನ್ನು ಪ್ರದರ್ಶಿಸಿದರು. ಆದರೆ ಮಾರ್ಕೆಟ್ ದ್ವಾರದಲ್ಲಿದ್ದ ಪಾಲಿಕೆಯ ಸಿಬಂದಿ ಈ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ವ್ಯಾಪಾರಿಗಳಿಗೆ ಮಾರ್ಕೆಟ್ ಪ್ರವೇಶಕ್ಕೆ ನಿರಾಕರಿ ಸಿದರು. ಆಗ ಕೆಲವು ವ್ಯಾಪಾರಿಗಳು ಹಿಂಬದಿಯ ದ್ವಾರದ ಮೂಲಕ ಮಾರ್ಕೆಟ್ ಒಳಗೆ ಪ್ರವೇಶಿಸಿದರು ಎಂದು ತಿಳಿದು ಬಂದಿದೆ.

ಆ ಬಳಿಕ ವ್ಯಾಪಾರಿಗಳು ಕಳೆದ ನಾಲ್ಕು ತಿಂಗಳಿನಿಂದ ಮುಚ್ಚಲಾದ ಅಂಗಡಿ ಮುಂಗಟ್ಟುಗಳನ್ನು ಶುಚಿಗೊಳಿಸಿ ವ್ಯಾಪಾರಕ್ಕೆ ಸಿದ್ಧತೆ ನಡೆಸಿ ದರು. ಸೆಂಟ್ರಲ್ ಮಾರ್ಕೆಟ್‌ನ ಅಂಗಡಿಗಳ ಬಾಗಿಲುಗಳನ್ನು ತೆರೆಯುತ್ತಲೇ ಗ್ರಾಹಕರು ಕೂಡ ಮಾರ್ಕೆಟ್ ಪ್ರವೇಶಿಸಿದರು. ಈ ಮಧ್ಯೆ ಕೆಲವರು ಬೈಕಂಪಾಡಿಯ ಎಪಿಎಂಸಿಯಲ್ಲೂ ಗುರುವಾರ ವ್ಯಾಪಾರ ನಡೆಸಿದ್ದು, ವಸ್ತುಸ್ಥಿತಿ ಅವಲೋಕಿಸಿ ಇತ್ತ ಬರುವ ಬಗ್ಗೆ ಯೋಚನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಲಾಕ್‌ಡೌನ್ ವೇಳೆ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ರಿಟೇಲ್ ವ್ಯಾಪಾರಸ್ಥರಿಗೆ ತಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿರಲಿಲ್ಲ. ಒಂದು ತಿಂಗಳ ಬಳಿಕ ರಿಟೇಲ್ ವ್ಯಾಪಾರಸ್ಥರಿಗಾಗಿ ನೆಹರೂ ಮೈದಾನಿನ ಬಳಿ ತಾತ್ಕಾಲಿಕ ಮಾರ್ಕೆಟ್ ಕಟ್ಟಡ ನಿರ್ಮಾಣ ಮಾಡಲು ಶಿಲಾನ್ಯಾಸ ನೆರವೇರಿಸಲಾಗಿತ್ತು. ಇದರ ಕಾಮಗಾರಿ ಆರಂಭವಾಗುತ್ತಿದ್ದಂತೆ ನೆಹರೂ ಮೈದಾನಿನ ಜಾಗಕ್ಕೆ ಸಂಬಂಧಿಸಿದಂತೆ ಕೆಲವು ಮಂದಿ ನ್ಯಾಯಾಲಯದ ಮೊರೆ ಹೋಗಿದ್ದು, ಇದರಿಂದ ಆ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಅತ್ತ ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಕೆಡವಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಮಾರ್ಕೆಟ್ ಕಟ್ಟಡ ನಿರ್ಮಾಣ ಮಾಡುವ ಯೋಜನೆಯ ಕಾಮಗಾರಿ ಕೂಡಾ ಆರಂಭವಾಗಿಲ್ಲ. ಇತ್ತ ರಿಟೇಲ್ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ರಸ್ತೆ ಬದಿ ವ್ಯಾಪಾರ ಮಾಡುವ ಬಗ್ಗೆ ನಗರದ ವಿವಿಧೆಡೆ ಶೆಡ್‌ಗಳನ್ನು ನಿರ್ಮಿಸಿ ಕೊಡಲಾಗಿದ್ದರೂ ಅವುಗಳಲ್ಲಿ ವ್ಯಾಪಾರ ನಡೆಸಲು ರಿಟೇಲ್ ವ್ಯಾಪಾರಿಗಳು ಮುಂದಾಗಿಲ್ಲ. ಹಾಗಾಗಿ ಪಾಲಿಕೆ ಇಕ್ಕಟ್ಟಿಗೆ ಸಿಲುಕಿತ್ತು.

ಪಾಲಿಕೆಯ ಎ.7ರ ಆದೇಶವನ್ನು ಪ್ರಶ್ನಿಸಿ ಸೆಂಟ್ರಲ್ ಮಾರ್ಕೆಟ್‌ನ 37 ಮಂದಿ ವ್ಯಾಪಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ವ್ಯಾಪಾರ ಸ್ಥರು ಪಾಲಿಕೆಯ ಆದೇಶದ ವಿರುದ್ಧ ತಡೆಯಾಜ್ಞೆ ತಂದಿದ್ದರು. ಅಂಗಡಿ ತೆರವು ಮಾಡುವ ಬಗ್ಗೆ ಪಾಲಿಕೆ ಸಲ್ಲಿಸಿದ್ದ ಅರ್ಜಿಗಳಿಗೂ ನ್ಯಾಯಾಲಯ ಒಪ್ಪಿಗೆ ನೀಡಿರಲಿಲ್ಲ. ಕಾನೂನು ಪಾಲನೆ ಮಾಡುವಂತೆ ನ್ಯಾಯಾಲಯವು ಪಾಲಿಕೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ತನ್ನ ಎ.7ರ ಆದೇಶವನ್ನು ಹಿಂಪಡೆದಿದೆ.

ಪಾಲಿಕೆಯಲ್ಲಿ ಪ್ರತಿಧ್ವನಿ

ಸೆಂಟ್ರಲ್ ಮಾರ್ಕೆಟ್ ವಿಚಾರಕ್ಕೆ ಸಂಬಂಧಿಸಿ ಗುರುವಾರ ನಡೆದ ಪಾಲಿಕೆಯ ಸಭೆಯಲ್ಲೂ ಚರ್ಚೆ ನಡೆದಿದೆ. ಪಾಲಿಕೆಯ ಕೆಟ್ಟ ನಿರ್ಧಾರದಿಂದ ಹೈಕೋರ್ಟ್‌ನಲ್ಲಿ ಪಾಲಿಕೆಗೆ ಮುಖಭಂಗವಾಗಿದೆ. ವ್ಯಾಪಾರಿಗಳಿಗೆ ಪುನರ್‌ವ್ಯವಸ್ಥೆ ಮಾಡಬೇಕಿತ್ತು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ವಿಪಕ್ಷ ನಾಯಕ ಅಬ್ದುಲ್ ರವೂಫ್ ಮತ್ತು ಕಾರ್ಪೊರೇಟರ್ ಶಶಿಧರ ಹೆಗ್ಡೆ ಹೇಳಿದರು.

ಸದ್ಯ ಮನಪಾ ತನ್ನ ಎ.7ರ ಆದೇಶವನ್ನು ಹಿಂದಕ್ಕೆ ಪಡೆದಿದೆ. ಇನ್ನು ಹೊಸ ಕಟ್ಟಡ ನಿರ್ಮಿಸಲು ಸರಕಾರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ನಡೆಸಲಾಗುವುದು. ಅಲ್ಲದೆ ಈ ಬಗ್ಗೆ ಪ್ರತ್ಯೇಕ ಸಭೆ ಕರೆದು ಚರ್ಚೆ ಮಾಡೋಣ ಎಂದು ಮೇಯರ್ ದಿವಾಕರ್ ಪಾಂಡೇಶ್ವರ ಹೇಳಿದರು.

ಪಾಲಿಕೆಯ ದ್ವಿಮುಖ ನೀತಿ: ವಕೀಲರ ಹೇಳಿಕೆ

ಮಹಾನಗರ ಪಾಲಿಕೆಯು ಹೈಕೋರ್ಟಿನಲ್ಲೊಂದು ಮಾತು ಹೇಳಿದರೆ, ಇಲ್ಲಿನ ವ್ಯಾಪಾರಸ್ಥರ ಬಗ್ಗೆ ಬೇರೊಂದು ನಿಲುವು ತಳೆಯುವ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿದೆ. ಒಂದೆಡೆ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ನಿಷೇಧ ಹೇರಿದ ಪಾಲಿಕೆಯು ಅದನ್ನು ಹಿಂಪಡೆದಿರುವುದಾಗಿ ಹೈಕೋರ್ಟಿಗೆ ತಿಳಿಸಿದೆ. ಆದರೆ ಇನ್ನೊಂದೆಡೆ ಅದೇ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡಲು ಮಾರ್ಕೆಟನ್ನು ಬಿಟ್ಟು ಕೊಡದೆ ಬೀಗ ಹಾಕಿ ತಡೆ ಒಡ್ಡುತ್ತಿದೆ. ಪಾಲಿಕೆಯ ದ್ವಿಮುಖ ಧೋರಣೆಗೆ ಇದು ಸಾಕ್ಷಿಯಾಗಿದೆ. - ಮುಹಮದ್ ಅನ್ಸಾರ್, ವ್ಯಾಪಾರಸ್ಥರ ಪರ ವಕೀಲ

ಮಾರ್ಕೆಟ್ ತೆರೆಯಬಹುದೆಂದು ನ್ಯಾಯಾಲಯ ಹೇಳಿಲ್ಲ- ಮೇಯರ್ 

ಸೆಂಟ್ರಲ್ ಮಾರ್ಕೆಟ್‌ನ್ನು ತೆರೆಯಬಹುದೆಂದು ಹೈಕೋರ್ಟ್ ಎಲ್ಲಿಯೂ ಹೇಳಿಲ್ಲ. ಮಾರ್ಕೆಟ್‌ನಲ್ಲಿ ವ್ಯಾಪಾರ ನಿಷೇಧಿಸಿದ ವೇಳೆ ವ್ಯಾಪಾರಸ್ಥರಿಗೆ ನೋಟಿಸ್ ನೀಡಿದ ಪ್ರಕ್ರಿಯೆ ಸರಿಯಾಗಿಲ್ಲ ಎಂದಷ್ಟೇ ಹೈಕೋರ್ಟ್ ಹೇಳಿದೆ. ಹಾಗಾಗಿ ಇದೀಗ ವ್ಯಾಪಾರಿಗಳು ಮಾರ್ಕೆಟ್ ತೆರೆದು ವ್ಯಾಪಾರ ಆರಂಭಿಸಿದ್ದು ತಪ್ಪು. ಕಳೆದ ಎಪ್ರಿಲ್‌ನಲ್ಲಿ ಮಾರ್ಕೆಟ್ ಮುಚ್ಚುವಾಗ ಮಾರ್ಕೆಟ್‌ನ ಪ್ರತಿಯೊಬ್ಬ ವ್ಯಾಪಾರಿಗಳಿಗೂ ನೋಟಿಸ್ ನೀಡದೆ ಎಲ್ಲರಿಗೂ ಅನ್ವಯವಾಗುವಂತೆ ಒಂದೇ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಮುಂದೆ ಎಲ್ಲಾ ವ್ಯಾಪಾರಿಗಳಿಗೂ ಪ್ರತ್ಯೇಕವಾಗಿ ಕಾನೂನು ಬದ್ಧವಾಗಿ ನೋಟಿಸ್ ನೀಡಲಾಗುವುದು. ಅಲ್ಲದೆ ಈ ಬಗ್ಗೆ ಮುಂದೆ ಜಿಲ್ಲಾಧಿಕಾರಿ ಕೂಡ ಕ್ರಮ ಕೈಗೊಳ್ಳಲಿದ್ದಾರೆ. - ದಿವಾಕರ್ ಪಾಂಡೇಶ್ವರ್, ಮೇಯರ್ ಮಂಗಳೂರು

ಲಾಕ್‌ಡೌನ್ ವೇಳೆ ಸೆಂಟ್ರಲ್ ಮಾರ್ಕೆಟನ್ನು ದಿಢೀರನೆ ಮುಚ್ಚಿ ರಿಟೇಲ್ ವ್ಯಾಪಾರಿಗಳನ್ನು ಮಹಾನಗರ ಪಾಲಿಕೆ ಬೀದಿ ಪಾಲು ಮಾಡಿತ್ತು. ಕಳೆದ 4-ತಿಂಗಳಿಂದ ನಾವು ಮತ್ತು ನಮ್ಮ ಕುಟುಂಬದವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ. ಇದೀಗ ಮಾರ್ಕೆಟ್‌ನಲ್ಲಿ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಕತ್ತಲಿದ್ದರೂ ನಾವು ವ್ಯಾಪಾರ ಮಾಡುವುದನ್ನು ಬಿಡಲಾರೆವು. ಯಾವುದೇ ವ್ಯಾಪಾರಿಗಳನ್ನು ತೆರವು ಮಾಡುವಾಗ ಕನಿಷ್ಠ 5-6 ತಿಂಗಳ ನೋಟಿಸ್ ನೀಡಬೇಕಾಗಿತ್ತು. ಪಾಲಿಕೆಯು ಮುಂದೆ ಕಾನೂನು ಬದ್ಧವಾಗಿ ನೋಟಿಸ್ ನೀಡಿದರೆ ನಾವು ಕೂಡಾ ಅದನ್ನು ಕಾನೂನು ಬದ್ಧವಾಗಿ ಎದುರಿಸುತ್ತೇವೆ. - ಅಮ್ಮಿ ಮಾರಿಪಳ್ಳ, ವ್ಯಾಪಾರಿ, ಸೆಂಟ್ರಲ್ ಮಾರ್ಕೆಟ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X