ಉಕ್ಕುಡ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯೋತ್ಸವ
ವಿಟ್ಲ, ಆ.15: ಇಲ್ಲಿಗೆ ಸಮೀಪದ ಉಕ್ಕುಡ ಪಬ್ಲಿಕ್ ಸ್ಕೂಲ್ ನಲ್ಲಿ 74ನೇ ಸ್ವಾತಂತ್ರ್ಯೋತ್ಸವ ದ ಧ್ವಜಾರೋಹಣವನ್ನು ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ತೈಬಾ ನೆರವೇರಿಸಿ ಶುಭಹಾರೈಸಿದರು.
ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಧಾನ ಕಾರ್ಯದರ್ಶಿ ಹನೀಫ್ ಕುದ್ದುಪದವು, ಸಂಚಾಲಕ ಅಬೂಬಕರ್ ಟೆಲಿಫೋನ್, ಜತೆ ಕಾರ್ಯದರ್ಶಿ ಮುನೀರ್ ದರ್ಬೆ, ಪ್ರಭಾರ ಮುಖ್ಯ ಶಿಕ್ಷಕಿ ಆಯಿಷತುಲ್ ಆರಿಫಾ, ಸಹ ಶಿಕ್ಷಕರಾದ ಜ್ಯೋತ್ಸ್ನಾ ಕೆ., ರಶೀದ ಬೇಗಂ, ಆಬಿದ ಪಿ., ಜಮಾಅತ್ ಕಮಿಟಿಯ ಸದಸ್ಯರಾದ ಅಬೂಬಕರ್ ಮೆಹರಾಝ್, ಜತೆ ಕಾರ್ಯದರ್ಶಿ ಹನೀಫ್ ನೆಕ್ಕರೆಕಾಡು, ಮಹಮೂದ್ ಕಾನತ್ತಡ್ಕ, ಮುಹಮ್ಮದ್ ಮಿದ್ಲಾಝ್, ರಝಾಕ್ ಕಾನತ್ತಡ್ಕ ಉಪಸ್ಥಿತರಿದ್ದರು.
ಡಿ.ಎಂ. ರಶೀದ್ ದರ್ಬೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story