ಮಂಜನಾಡಿ : ಅಲ್ ಮದೀನ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ
ಮಂಜನಾಡಿ: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜಂಟಿಯಾಗಿ ಸ್ವಾತಂತ್ರ್ಯೋತ್ಸ ಆಚರಿಸಲಾಯಿತು.
ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದಿರ್ ಸಖಾಫಿ ಧ್ವಜಾರೋಹಣಗೈದು, ಸ್ವಾತಂತ್ರ್ಯದ ಸಂದೇಶ ನೀಡಿದರು.
ಸಂಸ್ಥೆಯ ಅಧ್ಯಾಪಕರಾದ ಮುನೀರ್ ಕಾಮಿಲ್ ಸಖಾಫಿ, ಮುಹಮ್ಮದ್ ಮಾಸ್ಟರ್ ಮಲಾರ್, ಅಬ್ದುಲ್ ರಝಾಕ್ ಮಾಸ್ಟರ್ ನಾವೂರು ಮಾತನಾಡಿದರು.
ಶಾಲಾ ಸಂಚಾಲಕ ಅಬ್ದುಲ್ಲ ಹಾಜಿ ಮೋರ್ಲ, ಅಬ್ದುಲ್ ಖಾದಿರ್ ಝುಹ್ರಿ, ಪುತ್ತು ಮೋರ್ಲ, ಜುನೈದ್ ಮರ್ಝೂಖಿ, ಲಿಬಾನ್ ಮರ್ಝೂಖಿ, ನೌಫಲ್ ಮರ್ಝೂಖಿ ಕಕ್ಕಿಂಜೆ, ಆರಿಫ್ ಮರ್ಝೂಖಿ, ಅಬ್ದುಲ್ ರವೂಫ್, ಹೈದರ್ ಸರಳಿಕಟ್ಟೆ ಉಪಸ್ಥಿತರಿದ್ದರು.