ಕುಂದಾಪುರ ಎಎಸ್ಪಿ ಕಚೇರಿಯಲ್ಲಿ ಕೊರಗ ವಿದ್ಯಾರ್ಥಿನಿಯಿಂದ ಧ್ವಜಾರೋಹಣ

ಕುಂದಾಪುರ, ಆ.15: ಕುಂದಾಪುರ ಪೊಲೀಸ್ ಉಪವಿಭಾಗದ ಸಹಾಯಕ ಅಧೀಕ್ಷಕರ ಕಛೇರಿಯಲ್ಲಿ ನಡೆದ ಸ್ವಾಂತ್ರಂತ್ರ್ಯೋತ್ಸವದ ಧ್ವಜಾರೋಹಣವನ್ನು ಗೋಪಾಡಿಯ ಕೊರಗ ಕಾಲನಿಯ ರೋಶನಿ ಧಾಮದ ವಿ ದ್ಯಾರ್ಥಿನಿ ಸುನೀತಾ ನೆರವೇರಿಸಿದರು.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 434 ಅಂಕ ಪಡೆದ ಸುನೀತಾ ಜೊತೆ ಅದೇ ಕಾಲನಿ ಇತರೆ ಕೊರಗ ಸಮುದಾಯದ ಮಕ್ಕಳು, ಕುಂಭಾಸಿ ಮಕ್ಕಳ ಮನೆಯ ಮಕ್ಕಳು ಭಾಗವಹಿಸಿದರು. ಇದೇ ಸಂದರ್ಭ ಸುನೀತಾ ಹಾಗೂ ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾದ ಅದೇ ಕಾಲನಿಯ ವಿದ್ಯಾರ್ಥಿನಿ ಪ್ರಶಿಲಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಗೋಪಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಸರಸ್ವತಿ ಪುತ್ರನ್, ಸಮಾಜ ಸೇವಕ ಗಣೇಶ್ ಪುತ್ರನ್, ಕೊರಗ ಸಮುದಾಯದ ಮುಖಂಡ ಗಣೇಶ್ ಕುಂದಾಪುರ, ಎಎಸ್ಪಿ ಅವರ ಪತ್ನಿ ಅನಂತಾ ಮೊದಲಾದವರು ಉಪಸ್ಥಿತರಿದ್ದರು.

Next Story





